Tuesday, October 22, 2024
Google search engine
Homeತಾಜಾ ಸುದ್ದಿಏ.8ರಂದು ಸಂಭವಿಸಲಿದೆ 1000 ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯಗ್ರಹಣ

ಏ.8ರಂದು ಸಂಭವಿಸಲಿದೆ 1000 ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯಗ್ರಹಣ

ಒಂದು ಸಾವಿರ ವರ್ಷಕ್ಕೊಮ್ಮೆ ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣ ಏಪ್ರಿಲ್ 8ರಂದು ಸಂಭವಿಸಲಿದ್ದು, ಈ ಅಪರೂಪದ ಗ್ರಹಣ ವೀಕ್ಷಣೆಗೆ ಜಗತ್ತಿನ ಹಲವು ದೇಶಗಳು ಸಿದ್ಧತೆ ಆರಂಭಿಸಿವೆ.

2024 ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದೆ. ಈ ಮೂಲಕ ಇದರ ನೆರಳು ಭೂಮಿಯಲ್ಲಿ ಬೀಳಲಿದ್ದು, ಹಲವು ಅಪರೂಪಗಳು ಸಂಭವಿಸಲಿವೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಈ ರೀತಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದ್ದು 400 ರಿಂದ 1000 ವರ್ಷಗಳಿಗೆ ಒಮ್ಮೆ ಮಾತ್ರ. ಇದು ಮೆಕ್ಸಿಕೊದಿಂದ ಅಮೆರಿಕದ ಮತ್ತೊಂದು ತುದಿಯಾದ ಕೆನಡಾವರೆಗೆ ಸಂಪೂರ್ಣ ಗೋಚರವಾಗಲಿದ್ದು, ಸಂಪೂರ್ಣ ಕತ್ತಲು ಆವರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಇಂತಹ ಅಪರೂಪದ ಸೂರ್ಯಗ್ರಹಣ ವೀಕ್ಷಿಸಲು 2045ರವರೆಗೆ ಕಾಯಬೇಕಾಗುತ್ತದೆ. ಈ ಹಿಂದೆ 2033ರಲ್ಲಿ ಸಂಭವಿಸಿದ್ದಾಗ ಅಲಸ್ಕಾದಲ್ಲಿ ಕಂಡು ಬಂದಿದ್ದು, ಜನರ ವೀಕ್ಷಣೆ ಅಥವಾ ಅನುಭವಕ್ಕೆ ಸಮರ್ಪಕವಾಗಿ ಬಂದಿರಲಿಲ್ಲ.

ಸಂಪೂರ್ಣ ಸೂರ್ಯಗ್ರಹಣ ಮಾತ್ರವಲ್ಲ, ಗ್ರಹಣದ ಅವಧಿಯೂ ಕೂಡ ಹೆಚ್ಚು ಕಾಲ ಇರಲಿದೆ. ಇದರಿಂದ ಜನರ ಅನುಭವಕ್ಕೆ ಬರುವುದರಿಂದ ಇದು ಅಪರೂಪದ ಗ್ರಹಣವಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments