Friday, October 4, 2024
Google search engine
Homeತಾಜಾ ಸುದ್ದಿಕ್ಷಮೆ ಕೋರಿ 100 ವರ್ಷ ಇತಿಹಾಸದ ಕೃಷ್ಣ ರಾಧೆ ದೇವರ ವಿಗ್ರಹ ಮರಳಿಸಿದ ಕಳ್ಳ!

ಕ್ಷಮೆ ಕೋರಿ 100 ವರ್ಷ ಇತಿಹಾಸದ ಕೃಷ್ಣ ರಾಧೆ ದೇವರ ವಿಗ್ರಹ ಮರಳಿಸಿದ ಕಳ್ಳ!

ವಿಗ್ರಹ ಕದ್ದಿದ್ದರಿಂದ ಬಂದ ಕಷ್ಟಗಳನ್ನು ತಡೆಯಲು ಆಗದೇ ಕ್ಷಮಾಪಣೆ ಪತ್ರದೊಂದಿಗೆ ದೇವರ ವಿಗ್ರಹವನ್ನು ದೇವಸ್ಥಾನಕ್ಕೆ ಕಳ್ಳ ಮರಳಿಸಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ಜಿಲ್ಲೆಯಲ್ಲಿ ನಡೆದಿದೆ.

ಸೆಪ್ಟೆಂಬರ್ 23ಕ್ಕೆ ಕಾಣೆಯಾಗಿದ್ದ ದೇವರ ವಿಗ್ರಹವನ್ನು ಕಳ್ಳ ಅಕ್ಟೋಬರ್ 1ರಂದು ಮರಳಿಸಿದ್ದು, ದೇವಾಲಯಕ್ಕೆ ಮರಳಿದ ದೇವರ ವಿಗ್ರಹವನ್ನು ಶುದ್ಧ ಮಾಡಿ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ಪ್ರತಿಷ್ಠಾಪಿಸಲಾಗಿದೆ.

ವಿಗ್ರಹ ಕಳ್ಳತನವಾಗಿದ್ದಾಗ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲಾಗಿತ್ತು. ಆದರೂ ಈ ವಿಗ್ರಹವನ್ನು ಯಾರು ಕದ್ದರು ಎಂಬುದು ತಿಳಿದು ಬಂದಿರಲಿಲ್ಲ. ಆದರೆ ದೇವರೇ ತನ್ನ ಶಕ್ತಿಯಿಂದಾಗಿ ವಿಗ್ರಹ ದೇವಸ್ಥಾನಕ್ಕೆ ಮರಳಿದ ಬಂದಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಕಳ್ಳ ಕದ್ದಿದ್ದ ದೇವರ ವಿಗ್ರಹವನ್ನು ಸೆಣಬಿನ ಚೀಲದಲ್ಲಿ ತುಂಬಿ ಆಶ್ರಮದ ಒಳಕ್ಕೆ ಬರುವ ದಾರಿಯಲ್ಲಿ ಇಟ್ಟು ಹೋಗಿದ್ದಾನೆ. ಅಕ್ಟೋಬರ್ 1 ರಂದು ಬೆಳಿಗ್ಗೆ 11.30ರ ಸುಮಾರಿಗೆ ಚೀಲ ಗಮನಿಸಿ ಅದನ್ನು ಪರಿಶೀಲಿಸಿದಾಗ ಕಳೆದು ಹೋಗಿದ್ದ ವಿಗ್ರಹ ಪತ್ತೆಯಾಗಿದೆ. ಜೊತೆಗೆ ಕ್ಷಮಾಪಣಾ ಪತ್ರ ಕೂಡ ಸಿಕ್ಕಿದೆ.

ಸುಮಾರು 100 ವರ್ಷಕ್ಕೂ ಹಳೆಯ ಕೃಷ್ಣ ರಾಧೆಯ ಮೂರ್ತಿಯದು ಈ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಪಾದರಸ, ಕಂಚು, ಟಿನ್, ಕಬ್ಬಿಣ. ಸೀಸ ಬಳಸಿ ಈ ವಿಗ್ರಹ ತಯಾರಿಸಲಾಗಿದೆ. ಕಳ್ಳನಿಗೆ ಆ ವಿಗ್ರಹವನ್ನು ಹಿಂತಿರುಗಿಸುವ ಪರಿಸ್ಥಿತಿ ಏಕಾಯ್ತು? ಆ ಪತ್ರದಲ್ಲಿ ಏನಿದೆ? ಈ ವಿಗ್ರಹವನ್ನು ಯಾರು ಕದ್ದಿದ್ದು ಎಂಬುವುದು ಗೊತ್ತಾಗಿಲ್ಲ,

ಕಳ್ಳ ಬುದ್ಧಿವಂತಿಕೆಯಿಂದ ವಿಗ್ರಹ ಬಿಟ್ಟು ಹೋಗಿದ್ದಾನೆ. ಪತ್ರದಲ್ಲಿ “ನಾನು ತುಂಬಾ ದೊಡ್ಡ ತಪ್ಪು ಮಾಡಿದೆ. ಈ ವಿಗ್ರಹ ಕದ್ದ ಮೇಲೆ ತುಂಬಾ ಕೆಟ್ಟ ಕನಸು ಬೀಳ್ತಾ ಇತ್ತು. ನಿದ್ದೆ ಮಾಡಲು, ತಿನ್ನಲು ಸಾಧ್ಯವಾಗ್ತಾ ಇರಲಿಲ್ಲ. ಯಾವಾಗ ಆ ವಿಗ್ರಹ ಕದ್ದೆನೋ ನನ್ನ ನೆಮ್ಮದಿ ಸಂಪೂರ್ಣವಾಗಿ ಹಾಳಾಯ್ತು. ನನ್ನ ಮಗ ಹಾಗೂ ಪತ್ನಿಗೆ ತುಂಬಾನೇ ಅನಾರೋಗ್ಯ ಕಾಡಿತು. ಅಲ್ಪ ಹಣಕ್ಕಾಗಿ ತುಂಬಾನೇ ದೊಡ್ಡ ತಪ್ಪು ಮಾಡಿಬಿಟ್ಟೆ. ನಾನು ಇದನ್ನು ಮಾರಾಟ ಮಾಡುವುದಕ್ಕೆ ಕದ್ದೆ, ಆದರೆ ಇದು ಕದ್ದ ಮೇಲಿಂದ ಒಂದು ದಿನವೂ ನಿದ್ದೆ ಮಾಡಲು ಸಾಧ್ಯವಾಗಿಲ್ಲ, ನನ್ನ ತಪ್ಪಿಗೆ ಕ್ಷಮಿಸಿ, ಈ ವಿಗ್ರಹವನ್ನು ಇಲ್ಲೇ ಬಿಟ್ಟು ಹೋಗ್ತಾ ಇದ್ದೀನಿ, ಈ ವಿಗ್ರಹ ಸ್ವೀಕರಿಸಿ, ನಮ್ಮ ಮಕ್ಕಳನ್ನು ಕ್ಷಮಿಸಿ’ ಎಂದು ಬರೆದಿದ್ದಾನೆ.

ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಗ್ರಹ ಮಾರಿದರೆ ಹಣ ಸಿಗುತ್ತೆ ಅದರಿಂದ ನಾನು-ನನ್ನ ಮಕ್ಕಳು ಚೆನ್ನಾಗಿರಬಹುದೆಂದು ಕದ್ದು ಅದನ್ನು ಮಾರಾಟ ಮಾಡುವ ಸಲುವಾಗಿ ಚೆನ್ನಾಗಿ ಪಾಲಿಷ್ ಕೂಡ ಮಾಡಿದ್ದ. ಅದರೆ ಯಾವಾಗ ವಿಗ್ರಹ ಕದ್ದ ಆ ಕ್ಷಣದಿಂದ ಅವನು ಹೆಜ್ಜೆ ಹೆಜ್ಜೆಗೂ ತುಂಬಾ ಕಷ್ಟಪಟ್ಟ, ಸೆಪ್ಟೆಂಬರ್ 23ಕ್ಕೆ ಕದ್ದಿದ್ದು ಅಷ್ಟೇ, 7 ದಿನಗಳಲ್ಲಿ ಅಂದರೆ ಅಕ್ಟೋಬರ್ 1ಕ್ಕೆ ಅವನ ಬದುಕಿನಲ್ಲಿ ಅಷ್ಟೊಂದು ಕಷ್ಟ ಬಂದಿದೆ ಅಂದರೆ ದೇವರ ಮಹಿಮೆ ಎಂದು ಹೇಳಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments