Friday, October 25, 2024
Google search engine
Homeಕಾನೂನುವಯಸ್ಸು ದೃಢಪಡಿಸಲು ಆಧಾರ್ ಕಾರ್ಡ್ ಮಾನದಂಡವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ವಯಸ್ಸು ದೃಢಪಡಿಸಲು ಆಧಾರ್ ಕಾರ್ಡ್ ಮಾನದಂಡವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ವಯಸ್ಸು ದೃಢೀಕರಿಸಲು ಆಧಾರ್ ಕಾರ್ಡ್ ಮಾನದಂಡವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಬುಯಾನ್ ನೇತೃತ್ವದ ದ್ವಿಸದಸ್ಯ ಪೀಠ, ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ವಯಸ್ಸು ದೃಢೀಕರಣಕ್ಕೆ ಆಧಾರ್ ಕಾರ್ಡ್ ಅನ್ನು ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ನಿರ್ಧಾರವನ್ನು ಎತ್ತಿ ಹಿಡಿಯಿತು.

2015ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕನಿಗೆ ಪರಿಹಾರ ನೀಡುವ ಕುರಿತು ಉದ್ಭವಿಸಿದ ವಯಸ್ಸಿನ ದೃಢೀಕರಣ ಕುರಿತ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಶಾಲಾ ಲಿವಿಂಗ್ ಸರ್ಟಿಫಿಕೇಟ್ ನಲ್ಲಿ ನೀಡಲಾದ ಜನ್ಮ ದಿನಾಂಕವನ್ನು ಪರಿಗಣಿಸಬಹುದು ಎಂದು ಹೇಳಿದೆ.

ಭಾರತದಲ್ಲಿ ಆಧಾರ್ ಕಾರ್ಡ್ ಇರುವುದು ಗುರುತು ಪತ್ತೆಗೆ ಮಾತ್ರ ಹೊರತು ವಯಸ್ಸು ದೃಢೀಕರಣ ಪತ್ರವಲ್ಲ. ಯಾವುದೇ ವ್ಯಕ್ತಿಯ ವಯಸ್ಸು ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ ಹಾಗೂ ಶಾಲೆಯಲ್ಲಿ ನೀಡಲಾದ ದಿನಾಂಕವನ್ನು ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ರೋಹ್ಟಕ್ ನಲ್ಲಿ ಸಂಭವಿಸಿದ 2015ರ ಅಪಘಾತದಲ್ಲಿ ಬಾಲಕನಿಗೆ 19.35 ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ ತಪ್ಪಾದ ವಯಸ್ಸು ಆಧಾರ್ ಕಾರ್ಡ್ ನಲ್ಲಿ ಇದ್ದಿದ್ದರಿಂದ ಪರಿಹಾರ ಮೊತ್ತವನ್ನು 9.22 ಲಕ್ಷಕ್ಕೆ ಕಡಿತಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಆಧಾರ್ ಕಾರ್ಡ್ ನಲ್ಲಿ ನೀಡಿದ ಜನ್ಮ ದಿನಾಂಕದ ಪ್ರಕಾರ ಬಾಲಕನ ವಯಸ್ಸು 47 ವರ್ಷ ವಯಸ್ಸಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments