Saturday, July 6, 2024
Google search engine
Homeತಾಜಾ ಸುದ್ದಿಒಲಿಂಪಿಯಾಡ್ ಪ್ರಶಸ್ತಿ 2023-24ರಲ್ಲಿ ಮೈಸೂರು ವಿದ್ಯಾರ್ಥಿಗಳ ಸಾಧನೆ

ಒಲಿಂಪಿಯಾಡ್ ಪ್ರಶಸ್ತಿ 2023-24ರಲ್ಲಿ ಮೈಸೂರು ವಿದ್ಯಾರ್ಥಿಗಳ ಸಾಧನೆ

2023-24ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಮೈಸೂರಿನ ಧನ್ಯತಾ ಕೆ ಪಿ ಮತ್ತು ಅತ್ರೇಯಿ ಪಾಲ್ ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಎನ್ ಪಿ ಎಸ್ ಇಂಟರ್‍ನ್ಯಾಶನಲ್ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಧನ್ಯತಾ ಕೆ ಪಿ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‍ನಲ್ಲಿ ಪ್ರಥಮ ರ್ಯಾಂಕ್ ಪಡೆದು ಅಂತರಾಷ್ಟ್ರೀಯ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಗಳಿಸಿದ್ದಾರೆ.

ಎಕ್ಸೆಲ್ ಪಬ್ಲಿಕ್ ಸ್ಕೂಲ್‍ನ ಎಂಟನೇ ತರಗತಿಯ ವಿದ್ಯಾರ್ಥಿ ಅತ್ರೇಯಿ ಪಾಲ್ ಅಂತರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್‍ನಲ್ಲಿ ಎರಡನೇ ರ್ಯಾಂಕ್ ಪಡೆದು ಅಂತರಾಷ್ಟ್ರೀಯ ಬೆಳ್ಳಿ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಈ ವರ್ಷದ ಎಸ್‍ಓಎಫ್ ಒಲಿಂಪಿಯಾಡ್‍ನಲ್ಲಿ ಮೈಸೂರಿನ 27,665 ವಿದ್ಯಾರ್ಥಿಗಳು ಸೇರಿದಂತೆ 70 ದೇಶಗಳ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

2023-24ರ ಶೈಕ್ಷಣಿಕ ವರ್ಷಕ್ಕೆ ವಿಜೇತರು, ಅವರ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಗೌರವಿಸಲು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ನವದೆಹಲಿಯಲ್ಲಿ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಇಸ್ರೋದ ವಿಕ್ರಮ್‍ಸಾರಾಭಾಯ್ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಪೆÇ್ರ.ವೈ.ಎಸ್.ರಾಜನ್, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್‍ಐ)ದ ಕಾರ್ಯದರ್ಶಿ, ಲೇಖಕ, ತಂತ್ರಜ್ಞ, ಸಿಎಸ್ ಆಶಿಶ್ ಮೋಹನ್, ಮತ್ತು ಬೆಂಗಳೈರು ಎಪಿಯನ್ಸ್ ಸಾಫ್ಟ್‍ವೇರ್ ಪ್ರೈವೇಟ್ ಲಿಮಿಟೆಡ್ ಸಮಸ್ಥೆಯ ಸಿಇಓ ಆರ್.ರವಿ, ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಖ್ಯಾತ ನಟ ಮತ್ತು ಚಿತ್ರಕಥೆ ರಚನೆಗಾರ ಚೇತನ್ ಭಗತ್ ಭಾಗವಹಿಸಿದ್ದರು.

ಎಸ್‍ಒಎಫ್‍ನ ಸಂಸ್ಥಾಪಕ ನಿರ್ದೇಶಕ ಮಹಾಬೀರ್ ಸಿಂಗ್, ಒಲಿಂಪಿಯಾಡ್ ಪರೀಕ್ಷೆಗಳನ್ನು ಆಯೋಜಿಸಿ 26 ವರ್ಷಗಳು ಪೂರ್ಣಗೊಂಡಿವೆ ಎಂದು ಹೆಮ್ಮೆಯಿಂದ ಘೋಷಿಸಿದರು. “ಈ ಶೈಕ್ಷಣಿಕ ವರ್ಷದಲ್ಲಿ, 70 ದೇಶಗಳಿಂದ 91,000 ಶಾಲೆಗಳು ಭಾಗವಹಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

7000 ಶಾಲೆಗಳ 1,30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಉನ್ನತ ಶ್ರೇಣಿಗಾಗಿ ಪ್ರಶಸ್ತಿಗಳನ್ನು ಪಡೆದರು ಮತ್ತು 1,000,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಉತ್ತಮ ಸಾಧನೆಗಾಗಿ “ಉತ್ಕೃಷ್ಟತೆಯ ಚಿನ್ನದ ಪದಕಗಳನ್ನು” ನೀಡಿ ಗೌರವಿತರಾದರು.

ಇದಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಅವರ ಸಮರ್ಪಣೆಗಾಗಿ 3,500 ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments