Thursday, September 19, 2024
Google search engine
Homeತಾಜಾ ಸುದ್ದಿಪೈರೇಟ್ಸ್ ಆಫ್ ಕೆರಿಬಿಯನ್ ಖ್ಯಾತಿಯ ನಟ ಟಮಾಯೊ ಪೆರ್ರಿ ಶಾರ್ಕ್ ಗೆ ಬಲಿ!

ಪೈರೇಟ್ಸ್ ಆಫ್ ಕೆರಿಬಿಯನ್ ಖ್ಯಾತಿಯ ನಟ ಟಮಾಯೊ ಪೆರ್ರಿ ಶಾರ್ಕ್ ಗೆ ಬಲಿ!

ಜನಪ್ರಿಯ ಪೈರೇಟ್ಸ್ ಆಫ್ ಕೆರಿಬಿಯನ್ ಖ್ಯಾತಿಯ ಚಿತ್ರ ನಟ ಮತ್ತು ಸರ್ಫಿಂಗ್ ತರಬೇತುದಾರ 49 ವರ್ಷದ ಟಮಾಯೊ ಪೆರ್ರಿ ಹವಾಯಿ ಸಮುದ್ರದಲ್ಲಿ ಶಾರ್ಕ್ ದಾಳಿಗೆ ಬಲಿಯಾಗಿದ್ದಾರೆ.

ಬ್ಲೂ ಕ್ರಷ್ ಮತ್ತು ಚಾರ್ಲಿಸ್ ಏಂಜಲಿಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ 49 ವರ್ಷದ ಟಮಾಯೊ ಪೆರ್ರಿ ಭಾನುವಾರ ಗೋಟ್ ದ್ವೀಪದಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದಾಗ ಶಾರ್ಕ್ ದಾಳಿ ನಡೆಸಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಸಮುದ್ರ ತೀರದಲ್ಲೇ ನಡೆದ ಶಾರ್ಕ್ ದಾಳಿಯಿಂದ ಟಮಯೊ ಪೆರ್ರಿ ಅವರನ್ನು ಕರೆತರಲಾಯಿತಾದರೂ ಸಮುದ್ರ ದಡಕ್ಕೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಪೆರ್ರಿ ಶಾರ್ಕ್ ಹಲವು ಕಡೆ ಕಚ್ಚಿದ ಗಾಯದ ಗುರುತುಗಳಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಸಮುದ್ರ ತೀರದ ರಕ್ಷಣಾ ಇಲಾಖೆಯಲ್ಲಿ ಜುಲೈ 2016ರಲ್ಲಿ ಕೆಲಸ ಮಾಡಲು ಆರಂಭಿಸಿದ್ದ ಪೆರ್ರಿ ಶಾರ್ಕ್ ದಾಳಿಗೆ ಬಲಿಯಾಗಿದ್ದು ದುರ್ದೈವ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments