Sunday, September 8, 2024
Google search engine
Homeತಾಜಾ ಸುದ್ದಿಅಕ್ಷಯ್ ಕುಮಾರ್ ಗೆ ಕೋವಿಡ್-19 ಪಾಸಿಟಿವ್ ದೃಢ!

ಅಕ್ಷಯ್ ಕುಮಾರ್ ಗೆ ಕೋವಿಡ್-19 ಪಾಸಿಟಿವ್ ದೃಢ!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಿಂದ ದೂರ ಉಳಿಯಲಿದ್ದಾರೆ.

ಸತತ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್ ಗೆ ಕೋವಿಡ್-19 ದೃಢಪಟ್ಟಿದ್ದು, ಜುಲೈ 12ರಂದು ಮುಂಬೈನಲ್ಲಿ ನಡೆಯಲಿರುವ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಮತ್ತು ರಾಧಿಕಾ ಮದುವೆ ಸಮಾರಂಭಕ್ಕೆ ಹಾಜರಾಗುತ್ತಿಲ್ಲ.

ಸರ್ಫಿರಾ ಚಿತ್ರದ ಪ್ರಮೋಷನ್ ಗಾಗಿ ಓಡಾಡುತ್ತಿದ್ದ ಅಕ್ಷಯ್ ಕುಮಾರ್ ಕಳೆದೆರಡು ದಿನಗಳಿಂದ ಅಸ್ವಸ್ಥರಾಗಿದ್ದು, ವೈದ್ಯಕೀಯ ತಪಾಸಣೆ ವೇಳೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದ ಹೊರಗೆ ಬಾರದೇ ಇರಲು ನಿರ್ಧರಿಸಿದ್ದಾರೆ.

ಜುಲೈ 12ರಂದು ಬೆಳಿಗ್ಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಫಿರಾ ಚಿತ್ರದ ಕೊನೆಯ ಹಂತದ ಪ್ರಮೋಷನ್ ನಿಂದಲೂ ಅಕ್ಷಯ್ ಹೊರಗುಳಿಯಲು ತೀರ್ಮಾನಿಸಿದ್ದಾರೆ.

ಜುಲೈ 12ರಂದು ಅನಂತ್ ಮತ್ತು ರಾಧಿಕಾ ಮದುವೆ ಮುಂಬೈನ ಬಾಂಧ‍್ರಾದಲ್ಲಿ ನಡೆಯಲಿದ್ದು, ನಂತರ ಎರಡು ದಿನಗಳ ಕಾಲ ಅರತಕ್ಷತೆ ಕಾರ್ಯಕ್ರಮ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments