Thursday, September 19, 2024
Google search engine
Homeತಾಜಾ ಸುದ್ದಿಖ್ಯಾತ ಸಿನಿಮಾ ಕೊರಿಯೊಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಎಫ್ ಐಆರ್ ದಾಖಲು!

ಖ್ಯಾತ ಸಿನಿಮಾ ಕೊರಿಯೊಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಎಫ್ ಐಆರ್ ದಾಖಲು!

ಖ್ಯಾತ ತೆಲುಗು ಸಿನಿಮಾ ಕೊರಿಯೋಗ್ರಾಫರ್ ಶೇಖ್ ಜಾನಿ ಬಾಷಾ ಆಲಿಯಾಸ್ ಜಾನಿ ಮಾಸ್ಟರ್ ವಿರುದ್ಧ 21 ವರ್ಷದ ಯುವತಿ ಲೈಂಗಿಕ ನಿಂದನೆ ದೂರು ನೀಡಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ಹಲವಾರು ಬಾರಿ ನನ್ನನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೈಬರಬಾದ್ ರಾಯ್ ದುರ್ಗಂ ಪೊಲೀಸ್ ಠಾಣೆಯಲ್ಲಿ ಜಿಯೋ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಜಾನಿ ಮಾಸ್ಟರ್ ಜೊತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕೆಲವು ತಿಂಗಳಿಂದ ನನ್ನನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ. ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಹಲವು ಕಡೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.

ಜಾನಿ ಮಾಸ್ಟರ್ ಸಲ್ಮಾನ್ ಖಾನ್ ಅಭಿನಯದ ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಚಿತ್ರಕ್ಕೂ ಕೋರಿಯೋಗ್ರಾಫ್ ಮಾಡಿದ್ದರು. ಅಲ್ಲದೇ ಇತ್ತೀಚೆಗೆ ಬಿಡುಗಡೆ ಆದ ಸ್ತ್ರೀ-2 ಚಿತ್ರದಲ್ಲಿ ಜನಪ್ರಿಯ ಗೀತೆ `ಆಯಿ ನಯಿ’ಗೂ ಕೊರಿಯೋಗ್ರಾಫ್ ಮಾಡಿದ್ದರು.

ಜಾನಿ ಮಾಸ್ಟರ್ ರಾಮ್ ಚರಣ್, ಜೂನಿಯರ್ ಎನ್ ಟಿಆರ್, ಪವನ್ ಕಲ್ಯಾಣ್, ಚಿರಂಜೀವಿ, ತಳಪತಿ ವಿಜಯ್, ಧನುಷ್ ಸೇರಿದಂತೆ ತೆಲುಗು ಮತ್ತು ತಮಿಳಿನಿ ಹಲವು ಖ್ಯಾತ ನಟರಿಗೆ ಕೊರಿಯೊಗ್ರಾಫ್ ಮಾಡಿದ್ದಾರೆ. ಘಟನೆ ಬಗ್ಗೆ ಯಾವುದೇ ನಟರು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments