Monday, May 11, 2026
Home ತಾಜಾ ಸುದ್ದಿ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ದೊಡ್ಡ ಸುದ್ದಿ: ಸಂಚಲನ ಸೃಷ್ಟಿಸಿದ ಹಿಂಡೆನ್‌ಬರ್ಗ್ ಹೊಸ ಬಾಂಬ್!

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ದೊಡ್ಡ ಸುದ್ದಿ: ಸಂಚಲನ ಸೃಷ್ಟಿಸಿದ ಹಿಂಡೆನ್‌ಬರ್ಗ್ ಹೊಸ ಬಾಂಬ್!

by Vahini
0 comments
hindsburg

ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿಯೊಂದು ಬರಲಿದೆ ಎಂದು ಹಿಂಡೆನ್ ಬರ್ಗ್ ಘೋಷಿಸಿದೆ. ಈ ಮೂಲಕ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಸ್ಫೋಟಕ ವರದಿ ಪ್ರಕಟಿಸುವ ಸುಳಿವು ನೀಡಿದೆ.

ಅಮೆರಿಕ ಮೂಲದ ತನಿಖಾ ವರದಿ ಪ್ರಕಟಿಸುವ ಹಿಂಡೆನ್ ಬರ್ಗ್ ಸಂಸ್ಥೆ ಭಾರತದ ಕಂಪನಿಯೊಂದರ ಅಸಲಿ ಸತ್ಯದ ಕುರಿತು ವರದಿ ಪ್ರಕಟಿಸುವುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಹಿಂಡೆನ್ ಬರ್ಗ್ ಯಾವ ಕಂಪನಿ ವಿರುದ್ಧ ವರದಿ ಪ್ರಕಟಿಸಲಿದೆ ಎಂದು ಹೇಳಿಲ್ಲ. ಆದರೆ 2023 ಜನವರಿಯಲ್ಲಿ ಅದಾನಿ ಗ್ರೂಪ್ ವ್ಯವಹಾರಗಳು ಹಾಗೂ ಸರ್ಕಾರದ ಸಂಪರ್ಕ ಬೆಂಬಲ ಕುರಿತು ಪ್ರಕಟಿಸಿದ ವರದಿ ಸಾಕಷ್ಟು ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದರಿಂದ ಅದಾನಿ ಗ್ರೂಪ್ ಸಾಕಷ್ಟು ನಷ್ಟ ಅನುಭವಿಸಿತ್ತು.

ಅದಾನಿ ಗ್ರೂಪ್ ಗೆ ಸೆಬಿ ಕೂಡ ನೆರವು ನೀಡಿದ್ದು, ಅಡ್ಡದಾರಿಯ ಮೂಲಕ ಕಂಪನಿ ದಿಢೀರ್ ಬೆಳವಣಿಗೆ ಕಂಡಿದೆ. ಇದರ ಹಿಂದೆ ಸರ್ಕಾರದ ಕೈವಾಡವೂ ಇದೆ ಎಂದು ವರದಿ ಪ್ರಕಟಿಸಿತ್ತು.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign