Home ತಾಜಾ ಸುದ್ದಿ ಐಟಿಐ ವಿದ್ಯಾರ್ಥಿಗಳಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ಉಚಿತ ತರಬೇತಿ, ನೇಮಕಾತಿಗೆ ಅರ್ಜಿ ಆಹ್ವಾನ

ಐಟಿಐ ವಿದ್ಯಾರ್ಥಿಗಳಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ಉಚಿತ ತರಬೇತಿ, ನೇಮಕಾತಿಗೆ ಅರ್ಜಿ ಆಹ್ವಾನ

by Editor
0 comments
ITI students

ಬೆಂಗಳೂರು: ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ವತಿಯಿಂದ ಹೊಸದಾಗಿ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ದುಬೈ ಶಿಪ್ ಯಾರ್ಡ್ ನಲ್ಲಿ ವೃತ್ತಿ ತರಬೇತಿ ಮತ್ತು ನೇಮಕಾತಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಈಗಾಗಲೇ ಸ್ಲೋವಾಕಿಯಾ, ಯುಎಇ, ಹಂಗೇರಿ, ಸೇರಿದಂತೆ ಮತ್ತಿತರ ಕಡೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಯಶಸ್ಸೀಯಾಗಿರುವ ಕರ್ನಾಟಕ ಕೌಶಲ್ಯಭಿವೃದ್ದಿ ನಿಗಮವು ಇದೀಗ ಐಐಟಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ನಿಗಮದ ವತಿಯಿಂದಲೇ ಉಚಿತ ವಿದೇಶಿ ವೃತ್ತಿ ತರಬೇತಿ ಮತ್ತು ನೇಮಕಾತಿ ಕಾರ್ಯಕ್ರಮದ ಮೂಲಕ ಮತ್ತೊಂದು ಹೊಸ ದೃಡ ಹೆಜ್ಜೆ ಇಟ್ಟಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಉಚಿತ ವಿಮಾನ ಟಿಕೆಟ್, ತರಬೇತಿ ಸ್ಥಳದಲ್ಲೇ ಉಚಿತ ವಸತಿ, ಉಚಿತ ಆಹಾರ, ತರಬೇತಿ ಸ್ಥಳದೊಳಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ ವಿಮೆ, ವಾರ್ಷಿಕ ರಜೆಗಳು, ಹಾಗೂ ಹಿಂದಿರುಗುವ ಪ್ರಯಾಣದ ವಿಮಾನ ಟಿಕೆಟ್ ಸೌಲಭ್ಯವನ್ನು ನಿಗಮವು ಒದಗಿಸಿ ಕೊಡುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 27,000 ರೂ. ವೇತನ (1200 AED ಮೊದಲನೇ ವರ್ಷ) ನಂತರ ವಾರ್ಷಿಕವಾಗಿ ಏರಿಕೆ ಮಾಡಲಾಗುವುದು ಎಂದು ನಿಗಮವು ತಿಳಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನವಾಗಿದೆ. ಆನ್‌ಲೈನ್ ಸಂದರ್ಶನದ ದಿನಾಂಕವನ್ನು ಶರ್ಟ್‌ ಲಿಸ್ಟ್ ಅದ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ ಎಂದು ನಿಗಮವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

banner

 ಅರ್ಹತೆಗಳು

ವಿದ್ಯಾರ್ಹತೆ : ಐಟಿಐ (ಯಾವುದೇ ವಿಷಯಗಳು: ಫಿಟ್ಟರ್, ಫ್ಯಾಬ್ರಿಕೇಟರ್, ವೆಲ್ಡರ್, ಇತ್ಯಾದಿ) 2020-21 ರಲ್ಲಿ ಅಥವಾ ನಂತರ ಉತ್ತೀರ್ಣರಾಗಿರಬೇಕು.

ತಾಂತ್ರಿಕ ಕೌಶಲ್ಯ: ತಮ್ಮ ವೃತ್ತಿ ಕಲಿಕೆಗೆ ಸಂಬಂಧಿಸಿದ ಯಾವುದಾದರೂ ತಾಂತ್ರಿಕ ಕೌಶಲ್ಯದ ಕೋರ್ಸ್‌ನಲ್ಲಿ ಪ್ರಮಾಣಪತ್ರ.

ವಯೋಮಿತಿ: 18 ರಿಂದ 23 ವರ್ಷಗಳ ಒಳಗಿರಬೇಕು.

ಒಪ್ಪಂದ : 2 ವರ್ಷಗಳ ವೃತ್ತಿ ತರಬೇತಿ ಮತ್ತು 3 ವರ್ಷಗಳ ನಂತರ ವೃತ್ತಿಪರರಾಗಿ/ ತಂತ್ರಜ್ಞರಾಗಿ ಕೆಲಸ.

ಭಾಷಾ ನೈಪುಣ್ಯತೆ: ಸರಳ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರಬೇಕು.

ತಾಂತ್ರಿಕ ಸಾಮರ್ಥ್ಯಗಳು

ಬ್ಲೂ ಪ್ರಿಂಟ್ ಡ್ರಾಯಿಂಗ್‌ಗಳು ಟೆಕ್ನಿಕಲ್ ಸೈಸಿಫಿಕೇಷನ್ ಗಳನ್ನು ಓದಿ ಅರ್ಥಮಾಡಿಕೊಳ್ಳುವ ಹಾಗೂ ವ್ಯಾಖ್ಯಾನಿಸುವ ಮುಖಾಂತರ ನೀಡಿರುವ ಕೆಲಸಗಳನ್ನು ಸೂಚನೆ ಹಾಗೂ ಯೋಜನೆಯಂತೆ ಪೂರ್ಣಗೊಳಿಸುವ ಸಾಮರ್ಥ್ಯವಿರಬೇಕು.

ಕೆಲಸದ ಮಾಹಿತಿ ಸಲ್ಲಿಕೆ ಉಪಕರಣಗಳ ನಿರ್ವಹಣಾ ಜ್ಞಾನ, ಸಾಮಗ್ರಿಗಳ ಕ್ರಮ ಬದ್ದತೆ, ಸುರಕ್ಷತಾ ಪರಿಶೀಲನೆಗಳು, ಕೆಲಸದ ದಿನಚರಿ ಕುರಿತಾದ ಜ್ಞಾನವಿರಬೇಕು.

ಕೆಲಸದ ವಾತಾವರಣ ಹಾಗೂ ಅವಶ್ಯಕತೆಗೆ ತಕ್ಕಂತೆ ಹೊಂದಿಕೊಳ್ಳುವಿಕೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಕೆಲಸದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡುವುದು ಹಾಗೂ ಕಲಿಯುವ ಪ್ರವೃತ್ತಿ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರಬೇಕು.

ಯಾವುದೇ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಕೆಲಸ ಮಾಡುವ ಸಾಮರ್ಥ್ಯ, ಉತ್ತಮ ದೈಹಿಕ ಸಾಮರ್ಥ್ಯ, ಕಣ್ಣು ಕೈಗಳ ನಡುವೆ ಸಮನ್ವಯತೆ. ಹೊಸ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC-K) hr.imck@gmail.com ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560029

ವಾಟ್ಸಪ್ ಸಂಖ್ಯೆ ಅಥವಾ ದೂರವಾಣಿಗೆ ಕರೆ ಮಾಡಬಹುದಾಗಿದೆ.9606492213/9606492214

ನೋಂದಣಿ ಸಂಖ್ಯೆ 1154/KAR/COM/1000+/5/9567/2019 ಸಂಪರ್ಕಿಸಲು ಕೋರಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
Mangaluru ಬೆಳ್ತಂಗಡಿಯ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು Test ranking ಅಗ್ರಸ್ಥಾನಕ್ಕೆ ಮರಳಿದ ಬುಮ್ರಾ, 2ನೇ ಸ್ಥಾನಕ್ಕೆ ಜಿಗಿದ ಜೈಸ್ವಾಲ್ ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ? World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ!