Sunday, September 8, 2024
Google search engine
Homeಕ್ರೀಡೆಕೊಲಂಬಿಯಾ ಮಣಿಸಿ ದಾಖಲೆಯ 16 ಬಾರಿ ಕೋಪಾ ಅಮೆರಿಕ ಪ್ರಶಸ್ತಿಗೆ ಮುತ್ತಿಟ್ಟ ಅರ್ಜೆಂಟಿನಾ!

ಕೊಲಂಬಿಯಾ ಮಣಿಸಿ ದಾಖಲೆಯ 16 ಬಾರಿ ಕೋಪಾ ಅಮೆರಿಕ ಪ್ರಶಸ್ತಿಗೆ ಮುತ್ತಿಟ್ಟ ಅರ್ಜೆಂಟಿನಾ!

ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ರೋಚಕ ಹಣಾಹಣಿಯಲ್ಲಿ ಕೊಲಂಬಿಯಾ ತಂಡವನ್ನು 1-0 ಗೋಲಿನಿಂದ ಸೋಲಿಸಿ 16ನೇ ಬಾರಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಚಂಆಪಿಯನ್ ಆಗಿ ಹೊರಹೊಮ್ಮಿದೆ.

ಫ್ಲೋರಿಡಾದಲ್ಲಿ ಸೋಮವಾರ ನಡೆದ ಫೈನಲ್ ನಲ್ಲಿ ಲೌಟಾರೊ ಮಾರ್ಟಿನೆಸ್ ಹೆಚ್ಚುವರಿ ಆಟದ ವೇಳೆ (111ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನಿಂದ ಕೊಲಂಬಿಯಾ ತಂಡವನ್ನು ಅರ್ಜೆಂಟೀನಾ ಮಣಿಸಿತು.

ಅರ್ಜೆಂಟೀನಾ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಪಂದ್ಯದ 64ನೇ ನಿಮಿಷದಲ್ಲಿ ಗಾಯಗೊಂಡು ಪಂದ್ಯದ ಮಧ್ಯವೇ ಹೊರನಡೆಯುವ ಮೂಲಕ ಕಣ್ಣೀರಿನೊಂದಿಗೆ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಕ್ಕೆ ತೆರೆ ಎಳೆದರು.

ಇದಕ್ಕೂ ಮುನ್ನ ಭಾರೀ ಸಂಖ್ಯೆಯಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಜನರು ಮುಗಿಬಿದ್ದಿದ್ದರಿಂದ 82 ನಿಮಿಷಗಳ ಕಾಲ ತಡವಾಗಿ ಪಂದ್ಯ ಆರಂಭಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments