Thursday, December 25, 2025
Google search engine
Homeತಾಜಾ ಸುದ್ದಿಇತಿಹಾಸ ಬರೆದ ಶುಭಾಂಶು ಶುಕ್ಲ: ಯಶಸ್ವಿಯಾಗಿ ಧರೆಗಿರಿಳಿದ ಗಗನಯಾತ್ರಿಗಳ ತಂಡ

ಇತಿಹಾಸ ಬರೆದ ಶುಭಾಂಶು ಶುಕ್ಲ: ಯಶಸ್ವಿಯಾಗಿ ಧರೆಗಿರಿಳಿದ ಗಗನಯಾತ್ರಿಗಳ ತಂಡ

ಗಗನಯಾತ್ರಿ ಶುಭಾಂಶು ಶುಕ್ಲ 18 ದಿನಗಳ ಐತಿಹಾಸಿಕ ಬಾಹ್ಯಕಾಶ ಯಾನ ಮುಗಿಸಿ ಯಶಸ್ವಿಯಾಗಿ ಧರೆಗಿಳಿದಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋದ ಫೆಸಿಫಿಕ್ ಸಾಗರದಲ್ಲಿ ಡ್ರ್ಯಾಗನ್ ನೌಕೆಯಲ್ಲಿ 22 ಗಂಟೆಗಳ ಪ್ರಯಾಣ ಮುಗಿಸಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಯಶಸ್ವಿಯಾಗಿ ಭೂಮಿ ಸ್ಪರ್ಶವಾಗಿದೆ.

ಗ್ರೇಸ್ ಹೆಸರಿನ ಸ್ಪೇಸ್ ಎಕ್ಸ್ ನೌಕೆಯಲ್ಲಿ ಜೂನ್ 14ರಂದು ಮಧ್ಯಾಹ್ನ ಭೂಮಿಗೆ ಮರಳುವ ಪ್ರಯಾಣ ಆರಂಭಿಸಿದ್ದ ನಾಲ್ವರು ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿ ಸ್ಪರ್ಶಿಸಿದ್ದಾರೆ. ಈ ಮೂಲಕ ಭಾರತೀಯರ ಕನಸು ನನಸಾಗಿದೆ.

ಬಾಹ್ಯಕಾಶ ನಿಲ್ದಾಣದಿಂದ ಭೂಮಿಯವರೆಗೆ 76 ಲಕ್ಷ ಕಿ.ಮೀ. ದೂರ ಪ್ರಯಾಣ ಮಾಡಿದ್ದು, 288 ಬಾರಿ ಭೂಮಿಯನ್ನು ಗಗನಯಾತ್ರಿಗಳು ಪ್ರದಕ್ಷಿಣೆ ಹಾಕಿದ್ದಾರೆ. ಬಾಹ್ಯಕಾಶ ನಿಲ್ದಾಣದಲ್ಲಿ ಇದ್ದ 18 ದಿನಗಳಲ್ಲಿ ಗಗನಯಾತ್ರಿಗಳ ತಂಡ 60 ಅಧ್ಯಯನ ನಡೆಸಿದ್ದು, ಬಾಹ್ಯಕಾಶ ಕೇಂದ್ರದಲ್ಲಿ ಮೊಳಕೆ ಹೊಡೆಯುವ ಬೆಳವಣಿಗೆ ನಡೆಸಿದ ಭಾರತ ಪರೀಕ್ಷೆ ಯಶಸ್ವಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments