ಪಟಾಕಿ ಹೊಡೆಯುವಾಗ ಸಂಭವಿಸಿದ ಅವಘಡಗಳಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡ 29 ಮಕ್ಕಳು ಬೆಂಗಳೂರಿನ ಮಿಂಟೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಂಟೋ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 15 ಪ್ರಕರಣ ದಾಖಲಾಗಿದ್ದು, ಒಟ್ಟು 29 ಜನ ಚಿಕಿತ್ಸೆ ಪಡೆದಿದ್ದಾರೆ. ಈಗಾಗಲೇ 8 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇನ್ನುಳಿದ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಕರು 9 ಜನ ಸೇರಿದಂತೆ 9 ಮಕ್ಕಳು, ಅಕ್ಕಪಕ್ಕ ಇದ್ದ 8 ಜನ, ಪಟಾಕಿ ಹಚ್ಚಿದ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೆ ಸರ್ಜರಿ ಮಾಡಲಾಗಿದೆ.
ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 14 ಜನರಿಗೆ ಗಂಭೀರ ಗಾಯ, 15 ಮಂದಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದರು. ಕಣ್ಣಿಗೆ ಗಂಭೀರ ಗಾಯಗೊಂಡಿದ್ದ ನಾಲ್ವರಿಗೆ ಆಪರೇಷನ್ ಮಾಡಲಾಗಿದೆ.
ಬೆಂಗಳೂರಿನ ಉತ್ತರದಲ್ಲಿ 9 ದಕ್ಷಿಣದಲ್ಲಿ 4 ಪೂರ್ವದಲ್ಲಿ 6 ಈಶಾನ್ಯದಲ್ಲಿ 19 ಆಗ್ನೇಯ ಮತ್ತು ವೈಟ್‌ಫೀಲ್ಡ್ ನಲ್ಲಿ 9 ಪ್ರಕರಣಗಳು ದಾಖಲಾಗಿದ್ದು, ಬಿಜ್ಲಿ ಪಟಾಕಿ- 8 ಫ್ಲವರ್ ಪಾಟ್ – 4 ಲಕ್ಷ್ಮಿ ಪಟಾಕಿ- 2 ಸ್ಕೈ ಶಾಟ್ ರಾಕೆಟ್-1 ಇನ್ಸೆನ್ಸ್ ಸ್ಟಿಲ್-1 ಬೆಳ್ಳುಳ್ಳಿ ಪಟಾಕಿ-1 ಆಟೋಂಬಾಂಬ್-1 ಡಬಲ್ ಶಾಟ್-1 ಭೂ ಚಕ್ರ-1 ರಾಕೆಟ್-1 ಸ್ಫೋಟಿಸುವ ವೇಳೆ ಮಕ್ಕಳು ಗಾಯಗೊಂಡಿದ್ದಾರೆ.
ಅನಧಿಕೃತವಾಗಿ ಅಂಗಡಿ ತೆರೆದು ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆಯವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ಒಟ್ಟು 56 ಪ್ರಕರಣಗಳನ್ನು ದಾಖಲಿಸಿದ್ದಾರೆ.