ಜಗತ್ತಿನ ಅತೀ ದೊಡ್ಡ ವಿಮಾನ ಸಂಸ್ಥೆ ಬೋಯಿಂಗ್ ಶೇ.10ರಷ್ಟು ಅಂದರೆ ಸುಮಾರು 17,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.
ಉದ್ಯೋಗ ಕಡಿತದಿಂದ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹಾಗೂ ಕೌಶಲ್ಯಭರಿತ ನೌಕರರಿಂದ ಸಂಘಟನಾತ್ಮಕ ಕೆಲಸ ಪಡೆಯುವ ಉದ್ದೇಶದಿಂದ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಅಲ್ಲದೇ ಮುಂಬರುವ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಈ ಕ್ರಮ ಅನಿವಾರ್ಯ ಎಂದು ಬೋಯಿಂಗ್ ಸಂಸ್ಥೆ ತಿಳಿಸಿದೆ.
ಜಗತ್ತಿನ ಬಹುತೇಕ ವಾಣಿಜ್ಯ ವಿಮಾನಗಳನ್ನು ತಯಾರು ಮಾಡುವ ಬೋಯಿಂಗ್ ಸಂಸ್ಥೆ ಮುಂಬರುವ ದಿನಗಳಲ್ಲಿ ಇಲಾನ್ ಮಸ್ಕ್ ನೇತೃತ್ವದ ಸ್ಟಾರ್ ಲಿಂಕ್ ಜೊತೆ ಕೈಜೋಡಿಸಲಿದ್ದು, ಬಾಹ್ಯಕಾಶ ಯೋಜನೆಗಳಿಗೆ ರಾಕೆಟ್, ಬಾಹ್ಯಕಾಶ ನಿಲ್ದಾಣ, ಲೂನಾರ್ ಲ್ಯಾಂಡರ್ಸ್ ಸೇರಿದಂತೆ ಹಲವು ಉಪಕರಣಗಳನ್ನು ನಿರ್ಮಿಸಲಿದೆ.
ಬಾಹ್ಯಕಾಶಕ್ಕೆ ಸಂಬಂಧಿಸಿದ ೫೦ ಕಂಪನಿಗಳಲ್ಲಿ ನುರಿತ ತಜ್ಞ ತಾಂತ್ರಜ್ಞರಿಗೆ 1350 ಉದ್ಯೋಗಾವಕಶಗಳು ಲಭ್ಯವಿದೆ. ಆದರೆ 17,000 ಉದ್ಯೋಗಿಗಳನ್ನು ವಜಾಗೊಳಿಸಿದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.