ಅತ್ಯಂತ ಭೀಕರ ಎಂದು ಹೇಳಲಾಗುತ್ತಿರುವ ಬಾಂಬ್ ಚಂಡಮಾರುತ [bomb cyclone] ಫೆಸಿಫಿಕ್ ಮಹಾಸಾಗರದಲ್ಲಿ ಅತ್ಯಂತ ವೇಗವಾಗಿ ‘ಟ್ರಿಪಲ್ ಬಾಂಬ್’ ಆಗಿ ರೂಪಾಂತರಗೊಳ್ಳುತ್ತಿದೆ. ಈ ದಶ್ಯವನ್ನು ಸ್ಯಾಟಲೈಟ್ ಮೂಲಕ ಸೆರೆ ಹಿಡಿಯಲಾಗಿದೆ.
ಫೆಸಿಫಿಕ್ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ಬಾಂಬ್ ಚಂಡಮಾರುತ ಅತ್ಯಂತ ವೇಗವಾಗಿ ರೂಪಾಂತರ ಪಡೆಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಅಮರಿಕದ ಕ್ಯಾಲಿಫೋರ್ನಿಯಾ ಕಡಲ ತೀರವನ್ನು ಅಪ್ಪಳಿಸುವ ಸಾಧ್ಯತೆ ಇದೆ.
ಕ್ಯಾಲಿಫೋರ್ನಿಯಾ ಮತ್ತು ಪೆಸಿಫಿಕ್ ವಾಯುವ್ಯ ಭಾಗದಲ್ಲಿ ಈಗಾಗಲೇ ಧಾರಾಕಾರ ಮಳೆ, ಬಲವಾದ ಗಾಳಿ ಬೀಸುತ್ತಿದ್ದು, ಭಾರೀ ಹಿಮ ಪರ್ವತ ಅಪ್ಪಳಿಸುವ ಮಾದರಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಬಾಂಬ್ ಚಂಡಮಾರುತ ರೂಪಾಂತರ ಪಡೆಯುತ್ತಿರುವ ವೇಗವನ್ನು ಉಪಗ್ರಹದ ಮೂಲಕ ಚಿತ್ರೀಕರಿಸಲಾಗಿದೆ. ಈ ದೃಶ್ಯವೇ ಚಂಡಮಾರುತದ ಭೀಕರ ಪರಿಣಾಮಗಳ ಅಂದಾಜು ನೀಡುವಂತಿದೆ.
ಹವಾಮಾನ ತಜ್ಞರ ಪ್ರಕಾರ ಒಂದು ತಿಂಗಳ ಭಾರೀ ಮಳೆ ಕೇವಲ 48 ಗಂಟೆಗಳಲ್ಲಿ ಬೀಳಬಹುದು. ಕೆಲವು ಪ್ರದೇಶಗಳಲ್ಲಿ 16 ಇಂಚುಗಳಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದು ಒಂದು ರೀತಿನ ನೀರಿನ ಬಾಂಬ್ ಸ್ಫೋಟಗೊಂಡ ರೀತಿಯಲ್ಲಿ ಕರಾವಳಿಗೆ ಅಪ್ಪಳಿಸಲಿದೆ ಎಂದು ಎಚ್ಚರಿಸಿದ್ದಾರೆ.
ಬಾಂಬ್ ಚಂಡಮಾರುತ ಟ್ರಿಪಲ್ ಚಂಡಮಾರುತವಾಗಿ ಬದಲಾಗುತ್ತಿದ್ದು, ಇದರ ತೀವ್ರತೆ ಊಹಿಸುವುದೂ ಕೂಡ ಕಷ್ಟವಾಗಿದೆ. ಇದು ಸಹಜ ಚಂಡಮಾರುತದ ಮಾನದಂಡಗಳನ್ನು ಮೀರಿಸುತ್ತಿದ್ದು, ಇದರಿಂದ ಅನಾಹುತಗಳ ಬಗ್ಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ತಜ್ಞರು ವಿವರಿಸಿದ್ದಾರೆ.
ಚಂಡಮಾರುತ ಅಂದರೆ ಸಾಮಾನ್ಯವಾಗಿ 90 ಕಿ.ಮೀ. ನಿಂದ 150 ಕಿ.ಮೀ. ವೇಗದಲ್ಲಿ ಗಾಳಿ ಮಳೆ ಅಬ್ಬರದಿಂದ ಎಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಬಾಂಬ್ ಚಂಡಮಾರುತ ಒಂದೇ ಕಡೆ ಒಂದೇ ದಿನದಲ್ಲಿ ಕಂಡು ಕೇರಳಿಯದಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಲಿದೆ.
ಸಾಮಾನ್ಯವಾಗಿ ಬಾಂಬ್ ಒಂದು ಕಡೆ ಬಿದ್ದಾಗ ಆ ಪ್ರದೇಶವೆಲ್ಲಾ ಹೇಗೆ ಧ್ವಂಸವಾಗುತ್ತದೋ ಅದೇ ಮಾದರಿಯಲ್ಲಿ ಒಂದೇ ಬಾರಿಗೆ ಧೋತ್ತನೆ ಮೋಡವೇ ಕಳಚಿ ಬಿದ್ದಂತೆ ಭಾರೀ ಮಳೆಯಾಗಲಿದೆ. ಅಂದರೆ ಒಂದು ದೊಡ್ಡ ಬೆಟ್ಟವೇ ಮೈಮೇಲೆ ಬೀಳಲಿದೆ. ಈ ಮಳೆ ಪ್ರಮಾಣ ಅಂದಾಜಿಸುವುದು ಕಷ್ಟವಾದರೂ ಹವಾಮಾನ ಇಲಾಖೆ ಪ್ರಕಾರ 8 ಟ್ರೆಲಿಯನ್ ಗ್ಯಾಲೋನ್ ಮಳೆಯಾಗಲಿದೆ.
ಪಶ್ಚಿಮ ಕರಾವಳಿ ಭಾಗದಲ್ಲಿ ಈ ಬಾಂಬ್ ಚಂಡಮಾರುತ ಅಪ್ಪಳಿಸಲಿದ್ದು, ಇದು 5 ಬೃಹತ್ ಕೆರೆಗಳಿಗೆ ಸಮವಾಗಿರುತ್ತದೆ. ಹಿಮಾಪತ ಮಾದರಿಯ ಮಳೆ ಜೊತೆಗೆ ಭಾರೀ ಗಾಳಿ ಇರುವುದರಿಂದ ಮಳೆಯಾಗುವ ಜಾಗದಲ್ಲಿ ಏನೂ ಉಳಿಯುವುದು ಅನುಮಾನ. ಬಾಂಬ್ ಚಂಡಮಾರುತ ಸೃಷ್ಟಿಸುವ ಪ್ರವಾಹ ಎಷ್ಟು ವಿಧ್ವಂಸಕಾರಿ ಅಂದರೆ ಅಮೆರಿಕದ ಸುಮಾರು 5 ರಾಜ್ಯಗಳಲ್ಲಿ ಏನೂ ಉಳಿಸದಂತೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.
https://twitter.com/CIRA_CSU/status/1859051692823658995