Saturday, July 6, 2024
Google search engine
Homeತಾಜಾ ಸುದ್ದಿಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಬಾಕ್ಸರ್ ವಿಜೇಂದರ್!

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಬಾಕ್ಸರ್ ವಿಜೇಂದರ್!

ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬುಧವಾರ ಸೇರ್ಪಡೆಯಾಗಿದ್ದಾರೆ.

2019ರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ವಿಜೇಂದರ್ ಸಿಂಗ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬಧೌರಿ ವಿರುದ್ಧ ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ಸೋಲುಂಡಿದ್ದರು.

38 ವರ್ಷದ ವಿಜೇಂದರ್ ಅವರನ್ನು ಮಥುರಾ ಕ್ಷೇತ್ರದಲ್ಲಿ ಬಾಲಿವುಡ್ ನಟಿ ಹೇಮಮಾಲಿನಿ ವಿರುದ್ಧ ಕಣಕ್ಕಿಳಿಸಲು ಬಯಸಿತ್ತು. ಆದರೆ ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡ ವಿಜೇಂದರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

ವಿಜೇಂದರ್ ಬಿಜೆಪಿ ಸೇರ್ಪಡೆಯಿಂದ ಜಾಟ್ ಸಮುದಾಯದ ಮತಗಳು ಸಂಘಟಿತವಾಗಲಿವೆ ಎಂದು ಹೇಳಲಾಗಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿಜೇಂದರ್ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments