ಅಪಾಯಕಾರಿ ಆಗಿರುವ ವಿವಿಧ ತಳಿಯ ಶ್ವಾನಗಳನ್ನು ನಿಷೇಧಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಶ್ವಾನಗಳ ಸತತ ದಾಳಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಟ್ ಬುಲ್ ಟೆರ್ರರ್, ಅಮೆರಿಕನ್ ಬುಲ್ ಡಾಗ್, ರೋಟ್ಟೆವ್ಹೀಲರ್, ಮಾಸ್ಟಿಫ್ಸ್ ಸೇರಿದಂತೆ 23 ತಳಿಯ ಶ್ವಾನಗಳನ್ನು ನಿಷೇಧಿಸಿದೆ.
ನಿಷೇಧಿಸಲಾದ ತಳಿಯ ಶ್ವಾನಗಳನ್ನು ಮನೆಯಲ್ಲಿ ಸಾಕುತ್ತಿದ್ದರೆ ಕೂಡಲೇ ಅದನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸುವಂತೆ ಕೇಂದ್ರ ಪಶುಸಂಗೋಪನಾ ಸಚಿವಾಲಯ ಬುಧವಾರ ಆದೇಶದಲ್ಲಿ ತಿಳಿಸಿದೆ.
ಮನುಷ್ಯರ ಮೇಲೆ ಅದರಲ್ಲೂ ಸಾಕಿದ ಮನೆ ಯಜಮಾನರ ಮೇಲೆ ಪದೇಪದೆ ದಾಳಿ ಪ್ರಕರಣಗಳು ವರದಿಯಾಗುತ್ತಿರು ಬಗ್ಗೆ ಪ್ರಾಣಿ ದಯಾ ಸಂಘಗಳು ಹಾಗೂ ನಾಗರಿಕರು ಸೇರಿದಂತೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.