Thursday, September 19, 2024
Google search engine
Homeಕ್ರೀಡೆಆರ್ ಸಿಬಿ ಡ್ರೆಸ್ಸಿಂಗ್ ರೂಮ್ ಗೆ ಕ್ರಿಸ್ ಗೇಲ್ ಭೇಟಿ, ಕೊಹ್ಲಿ ಜೊತೆ ಡ್ಯಾನ್ಸ್!

ಆರ್ ಸಿಬಿ ಡ್ರೆಸ್ಸಿಂಗ್ ರೂಮ್ ಗೆ ಕ್ರಿಸ್ ಗೇಲ್ ಭೇಟಿ, ಕೊಹ್ಲಿ ಜೊತೆ ಡ್ಯಾನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರ್ ಸಿಬಿ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೀಕ್ಷಿಸಿದರು.

ರೋಚಕ ಪಂದ್ಯದಲ್ಲಿ ಆರ್ ಸಿಬಿ 27 ರನ್ ಗಳಿಂದ ಗೆದ್ದು ಪ್ಲೇಆಫ್ ಪ್ರವೇಶಿಸುತ್ತಿದ್ದಂತೆ ಸಂಭ್ರಮಿಸಿದ ಗೇಲ್, ಪಂದ್ಯದ ನಂತರ ಆರ್ ಸಿಬಿ ಡ್ರೆಸ್ಸಿಂಗ್ ರೂಮ್ ಗೆ ಭೇಟಿ ನೀಡಿ ಆಟಗಾರರನ್ನು ಅಭಿನಂದಿಸಿದ್ದೂ ಅಲ್ಲದೇ ಕೊಹ್ಲಿ ಜೊತೆ ತಮ್ಮ ಐಕಾನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

https://twitter.com/VIPERoffl/status/1792108468008325277?ref_src=twsrc%5Etfw%7Ctwcamp%5Etweetembed%7Ctwterm%5E1792108468008325277%7Ctwgr%5Ed791ede4d42393e74a079f623ad600840839d34a%7Ctwcon%5Es1_c10&ref_url=https%3A%2F%2Fsports.ndtv.com%2Fipl-2024%2Fchris-gayle-enters-rcbs-dressing-room-puts-his-name-for-impact-player-role-5696781

ಕ್ರಿಸ್ ಗೇಲ್ ಅವರನ್ನು ಆರ್ ಸಿಬಿ ಬಿಟ್ಟುಕೊಟ್ಟಿತ್ತು. ಈ ಬಗ್ಗೆ ಅಸಮಾಧಾನ ಹೊಂದಿದ್ದರೂ ತಂಡದ ಜೊತೆಗಿನ ಬಾಂಧವ್ಯ ಮರೆಯದ ಗೇಲ್ ಅತ್ಯಂತ ಮಹತ್ವದ ಸಿಎಸ್ ಕೆ ವಿರುದ್ಧದ ಆರ್ ಸಿಬಿ ಪಂದ್ಯ ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದರು.

ಟೂರ್ನಿಯ ಆರಂಭದ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದ್ದ ಆರಂಭಿಸಿದ್ದ ಆರ್ ಸಿಬಿ ಪ್ಲೇಆಫ್ ಪ್ರವೇಶಿಸುವುದೇ ಅನುಮಾನವಾಗಿತ್ತು. ಆದರೆ ಸಂಘಟಿತ ಪ್ರದರ್ಶನದ ಮೂಲಕ ಸತತ 6 ಪಂದ್ಯಗಳಲ್ಲಿ ರೋಚಕ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments