Thursday, November 14, 2024
Google search engine
Homeತಾಜಾ ಸುದ್ದಿಉದ್ಯೋಗ ವಾರ್ತೆ: ಕಲ್ಲಿದ್ದಲು ಕಂಪನಿ ಕೋಲ್ ಇಂಡಿಯಾದಲ್ಲಿ 640 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗ ವಾರ್ತೆ: ಕಲ್ಲಿದ್ದಲು ಕಂಪನಿ ಕೋಲ್ ಇಂಡಿಯಾದಲ್ಲಿ 640 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಶ್ವದ ಏಕೈಕ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಲ್ಲಿ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ.

ಭಾರತ ಸರ್ಕಾರದ ಸಚಿವಾಲಯದ ಅಡಿಯಲ್ಲಿ ಸಿಐಎಲ್ ಕಾರ್ಯನಿರ್ವಹಿಸುತ್ತಿದ್ದು ಕೋಲ್ಕತ್ತಾದಲ್ಲಿ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಕಂಪನಿಯಲ್ಲಿ 2.25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸದ್ಯ ಇದೀಗ ಕೆಲ ಉದ್ಯೋಗಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ ಭರ್ತಿ ಮಾಡುತ್ತಿದೆ.

ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದಾಗಿದೆ. ಇನ್ನು ನಿಮಗೆ ಬೇಕಾದಂತಹ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲವನ್ನು ಸರಿಯಾಗಿ ಗಮನಿಸಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ coalindia.in ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು- ಮ್ಯಾನೇಜ್‌ಮೆಂಟ್ ಟ್ರೈನಿ (ಇ-2 ಗ್ರೇಡ್) ಒಟ್ಟು ಹುದ್ದೆಗಳು: 640 ಕೆಲಸ ಮಾಡುವ ಸ್ಥಳ- ಭಾರತದ್ಯಾಂತ ಸ್ಯಾಲರಿ- ತಿಂಗಳ ಸಂಬಳ- ಟ್ರೈನಿಯಲ್ಲಿ 50,000 ಟ್ರೈನಿಂಗ್ ಮುಗಿದ ಮೇಲೆ 60,000- 1,80,000

ವಯಸ್ಸಿನ ಮಿತಿ: 30 ವರ್ಷದ ಒಳಗಿನ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ- ಒಬಿಸಿ- 3 ವರ್ಷಗಳು ಎಸ್​​ಸಿ, ಎಸ್​ಟಿ- 5 ವರ್ಷಗಳು ವಿಶೇಷ ಚೇತನರು- 10 ವರ್ಷಗಳು

ಶೈಕ್ಷಣಿಕ ಅರ್ಹತೆ: ಬಿಇ, ಬಿಟೆಕ್, ಬಿಎಸ್​ಸಿ, ಎಂಸಿಎ, ಅರ್ಜಿ ಶುಲ್ಕ ಎಷ್ಟು ಇರುತ್ತೆ..? ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ- 1180 ರೂ.ಗಳು ಎಸ್​​ಸಿ, ಎಸ್​ಟಿ- ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಗೇಟ್​ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು 1:3 ಅಂತೆ ಸಿದ್ಧಪಡಿಸಲಾಗುತ್ತೆ. ದಾಖಲಾತಿ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಪ್ರಮುಖ ದಿನಾಂಕ ಅರ್ಜಿ ಸಲ್ಲಿಸಲು

ಕೊನೆಯ ದಿನಾಂಕ- 28 ನವೆಂಬರ್ 2024

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments