Saturday, June 29, 2024
Google search engine
Homeಕ್ರೀಡೆಫೋರ್ಬ್ಸ್ ಪಟ್ಟಿ ಬಿಡುಗಡೆ: ಕ್ರಿಸ್ಟಿಯಾನೊ ರೊನಾಲ್ಡೊ ಸತತ 4ನೇ ಬಾರಿ ವಿಶ್ವದ ದುಬಾರಿ ಕ್ರೀಡಾಪಟು!

ಫೋರ್ಬ್ಸ್ ಪಟ್ಟಿ ಬಿಡುಗಡೆ: ಕ್ರಿಸ್ಟಿಯಾನೊ ರೊನಾಲ್ಡೊ ಸತತ 4ನೇ ಬಾರಿ ವಿಶ್ವದ ದುಬಾರಿ ಕ್ರೀಡಾಪಟು!

ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಫೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ ದುಬಾರಿ ಕ್ರೀಡಾಪಟು ಪಟ್ಟಿಯಲ್ಲಿ ಸತತ ನಾಲ್ಕನೇ ಬಾರಿ ಅಗ್ರಸ್ಥಾನ ಪಡೆದಿದ್ದಾರೆ.

39 ವರ್ಷದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರಸ್ತುತ ಸೌದಿ ಅರೆಬಿಯಾದ ಅಲ್ ನಸರ್ ತಂಡದ ಪರ ಆಡುತ್ತಿದ್ದು, 260 ದಶಲಕ್ಷ ಡಾಲರ್ ಆದಾಯ ಪಡೆಯುತ್ತಿದ್ದು, ಇದು ಸಾರ್ವಕಾಲಿಕ ದಾಖಲೆ ಮೊತ್ತವಾಗಿದೆ.

ಸ್ಪೇನ್ ನ ಗಾಲ್ಫ್ ಪಟು ಜಾನ್ ರಹಮ್ 200 ದಶಲಕ್ಷ ಡಾಲರ್ ಆದಾಯ ಹೊಂದಿದ್ದು, ರೊನಾಲ್ಡೊ ನಂತರದ ಎರಡನೇ ಸ್ಥಾನ ಗಳಿಸಿದ್ದಾರೆ. ಅಲ್ಲದೇ ಇನ್ ಸ್ಟಾಗ್ರಾಂನಲ್ಲಿ 629 ದಶಲಕ್ಷ ಫಾಲೋವರ್ಸ್ ಹೊಂದಿದ್ದು, ಇದರಿಂದ ವಿವಿಧ ಕಂಪನಿಗಳ ಪರ ಜಾಹಿರಾತುಗಳಲ್ಲಿ ಪಾಲ್ಗೊಂಡಿದ್ದಾರೆ.

8 ಬಾರಿ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಪ್ರಶಸ್ತಿ ಪಡೆದು ಅರ್ಜೆಂಟೀನಾಗೆ ವಿಶ್ವಕಪ್ ತಂದುಕೊಟ್ಟ 36 ವರ್ಷದ ಲಿಯೊನೆಲ್ ಮೆಸ್ಸಿ ಆದಾಯ 135 ದಶಲಕ್ಷ ಡಾಲರ್ ಆಗಿದ್ದು ನಂತರದ ಸ್ಥಾನದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments