Kannadavahini

ಬಾರಿಸು ಕನ್ನಡ ಡಿಂಡಿಮವ

darshan wife
ತಾಜಾ ಸುದ್ದಿ ಮನರಂಜನೆ

ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಅನ್ ಫಾಲೋ ಮಾಡಿದ ಪತ್ನಿ ವಿಜಯಲಕ್ಷ್ಮೀ, ಡಿಪಿ ಕೂಡ ಡಿಲಿಟ್!

ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂಗೆ ಕಾಲಿಟ್ಟಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇದೀಗ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಜೊತೆಗಿರುವ ಡಿಪಿ ಫೋಟೊವನ್ನು ಡಿಲಿಟ್ ಮಾಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ದರ್ಶನ್ ಮತ್ತು ಪವಿತ್ರ ಗೌಡ ಮದುವೆ ಆಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದ್ದರೆ, ಮತ್ತೊಂದೆಡೆ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಳಗಾಗಿದ್ದಾರೆ.

ದರ್ಶನ್ ಅವರನ್ನು ಮದುವೆ ಆಗಿರುವುದಾಗಿ ಪವಿತ್ರ ಗೌಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾಗ ವಿಜಯಲಕ್ಷ್ಮೀ ನಿಂದಿಸಿ ಪೋಸ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಪದೇಪದೆ ಜಗಳ ಆಗುತ್ತಿತ್ತು. ಆದರೆ ಇಬ್ಬರೂ ಮದುವೆ ಆಗಿರುವುದು ದೃಢಪಟ್ಟಿರಲಿಲ್ಲ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಅವರನ್ನು ಒಂದು ವರ್ಷದ ಹಿಂದೆ ದರ್ಶನ್ ಮದುವೆ ಆಗಿರುವುದು ದೃಢಪಟ್ಟಿದೆ. ಅಲ್ಲದೇ ಪವಿತ್ರಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದು, ಹಾಗೂ ಎರಡನೇ ಮದುವೆ ಆಗಿದ್ದಕ್ಕೆ ಟೀಕೆ ಮಾಡಿದ್ದಕ್ಕೆ ಪವಿತ್ರ ಸಲಹೆ ಮೇರೆಗೆ ದರ್ಶನ್ ಹಲ್ಲೆ ಮಾಡಿಸಿದ್ದರಿಂದ ಕೊಲೆ ಆಗಿ ದುರಂತಕ್ಕೆ ದಾರಿ ಮಾಡಿಕೊಟ್ಟಿದೆ.

LEAVE A RESPONSE

Your email address will not be published. Required fields are marked *