Monday, July 22, 2024
Google search engine
Homeತಾಜಾ ಸುದ್ದಿಇರಾನ್ ಅಧ್ಯಕ್ಷ ದುರ್ಮರಣ: ನಿಜವಾದ ಕೋಡಿಮಠ ಸ್ವಾಮೀಜಿ ಭವಿಷ್ಯ

ಇರಾನ್ ಅಧ್ಯಕ್ಷ ದುರ್ಮರಣ: ನಿಜವಾದ ಕೋಡಿಮಠ ಸ್ವಾಮೀಜಿ ಭವಿಷ್ಯ

ಹೆಲಿಕಾಫ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮೃತಪಟ್ಟಿದ್ದಾರೆ. ಇದರಿಂದ ಕೋಡಿಮಠದ ಸ್ವಾಮೀಜಿ ನುಡಿದ ಭವಿಷ್ಯ ನಿಜವಾದಂತಾಗಿದೆ.

ಹೊಸವರ್ಷದ ಆರಂಭದಲ್ಲಿ ಅಂದರೆ ಜನವರಿ 26ರಂದು ಗದಗದಲ್ಲಿ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿದ 2024ರ ಭವಿಷ್ಯದಲ್ಲಿ ಒಂದೆರಡು ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ. ಸಂತರ ಕೊಲೆಯಾಗುತ್ತವೆ ಎಂದಿದ್ದರು.

ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ಹೇಳಿ ಕೆಲವು ತಿಂಗಳು ಕಳೆಯುವಷ್ಟರಲ್ಲಿಯೇ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ.

ಇರಾನ್‌ ನಲ್ಲಿ ಪ್ರಧಾನಿ ಹುದ್ದೆ ಇಲ್ಲದ ಕಾರಣ ಅಧ್ಯಕ್ಷರೇ ರಾಷ್ಟ್ರ ಆಡಳಿತದ ಮುಖ್ಯಸ್ಥರಾಗಿದ್ದು, ಅವರ ಸಾವಾಗಿದೆ. ಅದಲ್ಲದೇ ಕೆಲ ದಿನಗಳ ಹಿಂದಷ್ಟೇ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್‌ ಫಿಕೋ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದ, ತೀವ್ರ ಗಾಯಗೊಂಡಿದ್ದ ರಾಬರ್ಟ್‌ ಫಿಕೋ ಪವಾಡಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments