ಯುರೋಪ್ ಇತಿಹಾಸದಲ್ಲೇ ಬಿದ್ದ ಭಾರೀ ಮಳೆಗೆ ಸ್ಪೇನ್ ತತ್ತರಿಸಿದ್ದು, ಸಾವಿನ ಸಂಖ್ಯೆ 158ಕ್ಕೆ ಏರಿಕೆಯಾಗಿದೆ.
ವೆಲೆನ್ಸಿಯಾ ಪ್ರದೇಶದಲ್ಲಿ ಸತತ 8 ಗಂಟೆಗಳ ಕಾಲ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ವರ್ಷದ ಮಳೆ ಕೇವಲ 8 ಗಂಟೆಯಲ್ಲಿ ಸುರಿದಿದೆ. ಇದರಿಂದ ಮರಳು ಮಿಶ್ರಿತ ನೀರು ನಗರಕ್ಕೆ ನುಗ್ಗಿದ್ದು, ಕಾರುಗಳು ತೇಲಾಡಿ ಕಸದ ರಾಶಿಯಂತೆ ಬಿದ್ದಿವೆ.
ಜರ್ಮನಿಯಲ್ಲಿ 2021ರಲ್ಲಿ ಸುರಿದ ಮಳೆಗೆ 185 ಮಂದಿ ಮೃತಪಟ್ಟಿದ್ದರು. 1790ರಲ್ಲಿ ರೊಮೆನಿಯಾದಲ್ಲಿ 210 ಮಂದಿ ಅಸುನೀಗಿದ್ದರು. 1967ರಲ್ಲಿ ಪೋರ್ಚುಗಲ್ ನಲ್ಲಿ 500 ಮಂದಿ ಸಾವಿಗೀಡಾಗಿದ್ದರು.