Wednesday, June 26, 2024
Google search engine
Homeತಾಜಾ ಸುದ್ದಿದಾಂಪತ್ಯಕ್ಕೆ ಕಾಲಿಡಲಿರುವ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್: ಗೆಳತಿ ಯಾರು ಗೊತ್ತಾ?

ದಾಂಪತ್ಯಕ್ಕೆ ಕಾಲಿಡಲಿರುವ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್: ಗೆಳತಿ ಯಾರು ಗೊತ್ತಾ?

ಮದ್ಯದ ದೊರೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಮಲ್ಯ ಮತ್ತೆ ಸುದ್ದಿಯಾಗಿದ್ದಾರೆ.

ಸಿದ್ಧಾರ್ಥ್ ಮಲ್ಯ ದೀರ್ಘಕಾಲದ ಗೆಳತಿ ಮಾಜಿ ರೂಪದರ್ಶಿ ಹಾಗೂ ನಟಿ ಜಾಸ್ಮಿನ್ ಅವರನ್ನು ಮುಂದಿನ ವಾರ ಮದುವೆ ಆಗುವ ಸಾಧ್ಯತೆ ಇದ್ದು, ಮದುವೆ ದಿನಾಂಕ ಅಧಿಕೃತ ಘೋಷಣೆ ಮಾಡಲಾಗಿಲ್ಲ.

2023ರ ಹೋಲೋವೀನ್ ನಲ್ಲಿ ಸಿದ್ಧಾರ್ಥ್ ತನ್ನ ಗೆಳತಿಗೆ ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಈ ದೃಶ್ಯವನ್ನು ತಾವೇ ವೀಡಿಯೋ ಮಾಡಿಕೊಂಡು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಐಪಿಎಲ್ ಟಿ-20 ಟೂರ್ನಿ ಆರಂಭದ ಕೆಲವು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದ ಸಿದ್ದಾರ್ಥ್ ಮಲ್ಯ ನಂತರ ವಿದೇಶದಲ್ಲಿ ತಂದೆಯೊಂದಿಗೆ ತಲೆ ಮರೆಸಿಕೊಂಡಿದ್ದರು. ನಂತರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಫಾದರ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೆ ಮಾನಸಿಕ ಸದೃಢತೆ ಬಗ್ಗೆ ಸಿದ್ಧಾರ್ಥ್ ಎರಡು ಪುಸ್ತಕಗಳನ್ನು ಬರೆದಿದ್ದು, ಅವು ಜನಪ್ರಿಯವಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments