Wednesday, July 3, 2024
Google search engine
Homeಕ್ರೀಡೆಯುರೋ ಕಪ್: ಸೋಲಿನ ದವಡೆಯಿಂದ ಪಾರಾಗಿ ಕ್ವಾರ್ಟರ್ ಫೈನಲ್ ಗೆ ಇಂಗ್ಲೆಂಡ್ ಲಗ್ಗೆ

ಯುರೋ ಕಪ್: ಸೋಲಿನ ದವಡೆಯಿಂದ ಪಾರಾಗಿ ಕ್ವಾರ್ಟರ್ ಫೈನಲ್ ಗೆ ಇಂಗ್ಲೆಂಡ್ ಲಗ್ಗೆ

ಕೊನೆಯ ಕ್ಷಣದವರೆಗೂ ಸೋಲಿನ ಭೀತಿಯಲ್ಲಿದ್ದ ಇಂಗ್ಲೆಂಡ್ ಆಟಗಾರರು ಕೊನೆಯ ಕ್ಷಣದಲ್ಲಿ ಸಿಡಿಸಿದ 2 ಗೋಲುಗಳಿಂದ ನೆರವಿನಿಂದ ಸ್ಲೊವಾಕಿಯಾ ತಂಡವನ್ನು ಮಣಿಸಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದೆ.

ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಇಂಗ್ಲೆಂಡ್ ಪರ ಜೂಡ್ ಬೆಲ್ಲಿಂಗಮ್ (90+5ನೇ ನಿಮಿಷ) ಮತ್ತು ಹ್ಯಾರಿ ಕೇನ್ (91ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ರೋಚಕ ಗೆಲುವು ತಂದುಕೊಟ್ಟರೆ, ಸ್ಲೊವಾಕಿಯಾ ಪರ ಇವಾನ್ ಸ್ಕೆರಾನ್ಜ್ (25ನೇ ನಿಮಿಷ) ಏಕೈಕ ಗೋಲು ಗಳಿಸಿದರು.

ಸ್ಲೊವಾಕಿಯಾ ತಂಡ ಇವಾನ್ ಮೊದಲ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಪಂದ್ಯದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳುವ ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿತ್ತು. ಆದರೆ ಹ್ಯಾರಿ ಕೇನ್ ಹೆಚ್ಚುವರಿ ಆಟದ ಮೊದಲ ನಿಮಿಷದಲ್ಲೇ ಗೋಲು ಬಾರಿ 1-1ರಿಂದ ಇಂಗ್ಲೆಂಡ್ ಗೆ ಸಮಬಲದ ಗೌರವ ತಂದುಕೊಟ್ಟರು.

ನಾಲ್ಕು ನಿಮಿಷಗಳ ಅಂತರದಲ್ಲಿ ಜೂನ್ ಮತ್ತೊಂದು ಗೋಲು ಬಾರಿಸಿ ಇಂಗ್ಲೆಂಡ್ ಗೆ ಸೋಲಿನ ದವಡೆಯಿಂದ ತಪ್ಪಿಸಿದ್ದೂ ಅಲ್ಲದೇ ರೋಚಕ ಜಯದ ಮೂಲಕ ಕ್ವಾರ್ಟರ್ ಫೈನಲ್ ಗೆ ಅರ್ಹತೆ ತಂದುಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments