ಭಾರತದ ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗಿಳ್ ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪರಿಸರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಕುರಿತ ಸಂಶೋಧನೆ ನಡೆಸಿದ ಮಾಧವ್ ಗಾಡ್ಗಿಳ್ ಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ ಲಭಿಸಿದೆ.
ಜಾಗತಿಕ ಮಟ್ಟದಲ್ಲಿ ಜೀವವೈವಿಧ್ಯ ಪ್ರಮುಖ ತಾಣವಾಗಿರುವ ಬಗ್ಗೆ ಸಂಶೋಧನಾ ವರದಿಗಳನ್ನು ಪ್ರಕಟಿಸಿದ್ದಾರೆ. ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾದ ಮಾಧವ್ ಗಾಡ್ಗೀಲ್ ಭಾರತದಲ್ಲಿನ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಗಮನ ಸೆಳೆದಿದ್ದರು.
ಜನಸಂಖ್ಯೆ ಹೆಚ್ಚಳ, ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ಪರಿಸರ ಮೇಲೆ ಆಗುತ್ತಿರುವ ಪ್ರಭಾವ ಕುರಿತು ಅಧ್ಯಯನ ಮಾಡಲು ಸರ್ಕಾರ ರಚಿಸಿರುವ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಗೆ ಮಾಧವ್ ಗಾಡ್ಗಿಳ್ ಅಧ್ಯಕ್ಷರಾಗಿದ್ದರು.
2011ರಲ್ಲಿ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದ್ದು, ಮತ್ತು ಅವುಗಳ ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ಪರಿಸರ ಸೂಕ್ಷ್ಮ ವಲಯಗಳಾಗಿ ವಿಂಗಡಿಸಲು ಶಿಫಾರಸು ಮಾಡಿದ್ದರು.
ಪರಿಸರ ಸೂಕ್ಷ್ಮ ಪ್ರದೇಶ ವರ್ಗ-1ರಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಹೊಸ ಉಷ್ಣ ವಿದ್ಯುತ್ ಸ್ಥಾವರಗಳು, ಜಲವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಪ್ರಮಾಣದ ಪವನ ಶಕ್ತಿ ಯೋಜನೆಗಳ ಮೇಲೆ ನಿಷೇಧವನ್ನು ಶಿಫಾರಸು ಮಾಡಲಾಗಿದೆ. ಆದರೆ ಈ ಶಿಫಾರಸುಗಳಿಗೆ ರಾಜ್ಯ ಸರ್ಕಾರ, ಕೈಗಾರಿಕೆಗಳು ವಿರೋಧಿಸಿದ್ದವು.
ಪರಿಸರ ಸಂರಕ್ಷಣೆಗಾಗಿ ಅದರಲ್ಲೂ ಜೀವವೈವಿಧ್ಯತೆಯ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಮಿತಿ ನೀಡಿದ ವರದಿ ಬಗ್ಗೆ ನನಗೆ ತೃಪ್ತಿ ಹಾಗೂ ಹೆಮ್ಮೆ ಇದೆ ಎಂದು ಗಾಡ್ಗಿಳ್ ಹೇಳಿದ್ದರು.