Home ತಾಜಾ ಸುದ್ದಿ ಯಶ್ ಟಾಕ್ಸಿಕ್ ಚಿತ್ರಕ್ಕೆ ಕೈ ಜೋಡಿಸಿದ ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕ ಪೆರ್ರಿ!

ಯಶ್ ಟಾಕ್ಸಿಕ್ ಚಿತ್ರಕ್ಕೆ ಕೈ ಜೋಡಿಸಿದ ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕ ಪೆರ್ರಿ!

by Editor
0 comments
toxic

ಜಾನ್ ವಿಕ್, ಫಾಸ್ಟ್ ಅಂಡ್ ಫ್ಯೂರಿಯಸ್ ನಂತಹ ಸೂಪರ್ ಹಿಟ್ ಚಿತ್ರಗಳ ಖ್ಯಾತ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್ ಚಿತ್ರದ ಜೊತೆ ಕೈ ಜೋಡಿಸಿದ್ದಾರೆ. ಈ ಮೂಲಕ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಕುತೂಹಲ ಹಿಮ್ಮಡಿಯಾಗಿದೆ.

ಕೆಜಿಎಫ್-2 ಚಿತ್ರದ ನಂತರ ಯಶ್ ನಟಿಸುತ್ತಿರುವ ಟಾಕ್ಸಿಕ್ ಚಿತ್ರ ಗ್ಯಾಂಗ್ ವಾರ್ ಕಥಾ ಹಂದರ ಹೊಂದಿದ್ದು, ಚಿತ್ರಕ್ಕೆ ವಿನೂತನ ಸಾಹಸ ಸಂಯೋಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕರನ್ನು ಸೆಳೆಯಲಾಗಿದೆ.

ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿರುವ ಟಾಕ್ಸಿಕ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಸಾಹಸ ದೃಶ್ಯಗಳನ್ನು ಸಂಯೋಜಿಸಲು ಸಾಹಸ ನಿರ್ದೇಶಕ ಪೆರ್ರಿ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೆರ್ರಿ, ಯಶ್ ಅದ್ಭುತ ನಟ. ಅವರೊಂದಿಗೆ ಕೆಲಸ ಮಾಡಲು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ. ಈ ಚಿತ್ರದಲ್ಲಿ ವಿಶೇಷವಾದ ಸಾಹಸ ದೃಶ್ಯಗಳನ್ನು ಸಂಯೋಜಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

banner

ಚಿತ್ರದ ಚಿತ್ರೀರಕಣ ಮೊದಲೇ ಆರಂಭಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಆರಂಭವಾಗಿದೆ. ಆದರೆ ಅಂದುಕೊಂಡಂತೆ ಚಿತ್ರ ಮೂಡಿಬರುವ ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಎಷ್ಟು ಕುತೂಹಲ ಇದೆ ಅಂದರೆ ವಿಮಾನ ಪ್ರಯಾಣದಲ್ಲಿ ನಿದ್ದೆ ಬರಲಿಲ್ಲ ಎಂದು ಪೆರ್ರಿ ಹೇಳಿದ್ದಾರೆ. ಯಶ್ ಜೊತೆ ಕೈರಾ ಅಡ್ವಾಣಿ ನಟಿಸುತ್ತಿದ್ದು, 2025 ಏಪ್ರಿಲ್ 10ರಂದು ಬಿಡುಗಡೆಗೆ ಚಿತ್ರ ಪ್ರಯತ್ನಿಸಲಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ವಯನಾಡು ಭೂಕುಸಿತ ಸಂತ್ರಸ್ತರಿಗೆ `ಕೈ’ ಕೊಟ್ಟ ಕೇಂದ್ರ! ಐಫೋನ್, ಅಂಡ್ರಾಯ್ಡ್ ಗ್ರಾಹಕರಿಗೆ ಭಿನ್ನ ದರ: ಓಲಾ, ಉಬರ್‌ಗೆ ಕೇಂದ್ರ ನೋಟಿಸ್ ವನಿತೆಯರ ಕಿರಿಯರ ವಿಶ್ವಕಪ್: ಸೂಪರ್ ಸಿಕ್ಸ್ ಗೆ ಭಾರತ ಲಗ್ಗೆ ರಣಜಿಯಲ್ಲೂ ಕೈಕೊಟ್ಟ ಬ್ಯಾಟಿಂಗ್ ದಿಗ್ಗಜರು: ಮಿಂಚಿದ ಜಡೇಜಾ ಏಪ್ರಿಲ್ ಅಂತ್ಯದೊಳಗೆ 3000 ಲೈನ್ ಮೆನ್ ಗಳ ನೇಮಕ: ಸಚಿವ ಕೆಜೆ ಜಾರ್ಜ್ ಘೋಷಣೆ Raichur ಟ್ರ್ಯಾಕ್ಟರ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಗರ್ಬಿಣಿ ಸೇರಿ ಇಬ್ಬರ ಸಾವು ಮಂಗಳೂರು ಮಸಾಜ್ ಪಾರ್ಲರ್ ಮೇಲೆ ದಾಳಿ: ರಾಮಸೇನೆಯ 9 ಕಾರ್ಯಕರ್ತರು ಅರೆಸ್ಟ್ ರಣಜಿ ಟ್ರೋಫಿ: ಪಂಜಾಬ್ 55 ರನ್ ಗೆ ಆಲೌಟ್, ಕರ್ನಾಟಕಕ್ಕೆ ಭಾರೀ ಮುನ್ನಡೆ ನೀರಾವರಿಗೆ 1274 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿದೆ: ಸಿಎಂ ಸಿದ್ದರಾಮಯ್ಯ ಸಾಲಗಾರರ ಕಾಟ ತಾಳಲಾರದೇ ಘಟಪ್ರಭಾ ಸೇತುವೆಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ!