ಹವಾಮಾನ ವೈಪರಿತ್ಯದ ಪರಿಣಾಮ ಅಟ್ಲಾಂಟಿಕ್ ಸಾಗರದಲ್ಲಿ ಒಂದೇ ಬಾರಿ ಮೂರು ಚಂಡಮಾರುತಗಳು ಸೃಷ್ಟಿಯಾಗಿದ್ದು ಅಮರಿಕ ಮತ್ತು ಕೆರಿಬಿಯನ್ ಕಡಲ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.
2024ನೇ ಸಾಲಿನ ಚಂಡಮಾರುತಗಳ ಪೈಕಿ ಅತ್ಯಂತ ಪ್ರಬಲ ಚಂಡಮಾರುತ ಎಂದು ಹೇಳಲಾಗಿರುವ ಮಿಲ್ಟನ್, ಕಿರ್ಕ್ ಮತ್ತು ಲೆಸ್ಲಿ ಚಂಡಮಾರುತಗಳು ಅಟ್ಲಾಂಟಿಕ್ ಸಾಗರದಲ್ಲಿ ಸೃಷ್ಟಿಯಾಗಿದೆ.
ರಾಷ್ಟ್ರೀಯ ಚಂಡಮಾರುತ ಕೇಂದ್ರವು (NHC) ಈ ಅಭೂತಪೂರ್ವ ಚಂಡಮಾರುತುಗಳು ಸೃಷ್ಟಿಯಾಗುತ್ತಿರುವುದನ್ನು ದೃಢಪಡಿಸಿದ್ದು, ಈ ಚಂಡಮಾರುತಗಳು ಭಾರೀ ಹಾನಿ ಮಾಡುವ ಸಂಭವವಿದೆ.
ಇದೀಗ ಸೃಷ್ಟಿಯಾಗುತ್ತಿರುವ 3 ಚಂಡಮಾರುತಗಳು ಅಕ್ಟೋಬರ್ ನಲ್ಲಿ ಕ್ಷೀಣಿಸುವ ಸಾಧ್ಯತೆ ಇದೆ. ಮಿಲ್ಟನ್ ಚಂಡುಮಾರುತಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಗರಿಷ್ಠ ಚಲಿಸುವ ಸಾಧ್ಯತೆ ಇದೆ. ಮಿಲ್ಟನ್ ಚಂಡಮಾರುತ ಉತ್ತರದ ಕಡೆ ಚಲಿಸುತ್ತಿದ್ದು, ದೊಡ್ಡ ಪ್ರಮಾಣದ ಹಾನಿ ಮಾಡದೇ ಇದ್ದರೂ ಕರಾವಳಿ ತೀರದಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ.
ಕಿರ್ಕ್ ಚಂಡಮಾರುತ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಇದ್ದು, ಅಟ್ಲಾಂಟಿಕ್ ಸಾಗರದಲ್ಲೇ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಚಂಡುಮಾರುತ ಚಲನೆಗಳು ಇನ್ನೂ ಅಸ್ಪಷ್ಟವಾಗಿದ್ದು, ಗಮನಿಸಲಾಗುತ್ತಿದೆ.
ಲೆಸ್ಲಿ ಚಂಡಮಾರುತ ಬಹಮಾಸ್ ಬಳಿ ರೂಪಗೊಂಡಿದ್ದು, ಅಮೆರಿಕದ ಫ್ಲೋರಿಡಾ ಮತ್ತು ಅಗ್ನೇಯ ಅಮೆರಿಕದ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದ ಅಬ್ಬರದಿಂದ ಭೂಕುಸಿತಗಳು ಸಂಭವಿಸುವ ಸಾಧ್ಯತೆ ಇದೆ.