Saturday, October 5, 2024
Google search engine
Homeಕ್ರೀಡೆಯುರೋ ಕಪ್: ಪೋರ್ಚುಗಲ್ ಶೂಟೌಟ್ ಮಾಡಿ ಫೈನಲ್ ಗೆ ಲಗ್ಗೆ ಹಾಕಿದ ಫ್ರಾನ್ಸ್!

ಯುರೋ ಕಪ್: ಪೋರ್ಚುಗಲ್ ಶೂಟೌಟ್ ಮಾಡಿ ಫೈನಲ್ ಗೆ ಲಗ್ಗೆ ಹಾಕಿದ ಫ್ರಾನ್ಸ್!

ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿದ ಫ್ರಾನ್ಸ್ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.

ಶನಿವಾರ ಮುಂಜಾನೆ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಫ್ರಾನ್ಸ್ 5-3 ಗೋಲುಗಳಿಂದ ಪೋರ್ಚುಗಲ್ ತಂಡವನ್ನು ಸೋಲಿಸಿತು. ಸೆಮಿಫೈನಲ್ ನಲ್ಲಿ ಸ್ಪೇನ್ ತಂಡವನ್ನು ಫ್ರಾನ್ಸ್ ಎದುರಿಸಲಿದೆ.

ಪೋರ್ಚುಗಲ್ ತಂಡದ ಸೋಲಿನೊಂದಿಗೆ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಯುರೋ ಕಪ್ ಅಭಿಯಾನ ಅಂತ್ಯಗೊಂಡಿತು.

ಇದಕ್ಕೂ ಮುನ್ನ ಜಿದ್ದಾಜಿದ್ದಿನ ಹೋರಾಟದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದರಿಂದ ನಿಗದಿತ ಅವಧಿಯ ಆಟ ಮುಗಿದಾಗ 0-0ಯಿಂದ ಸಮಬಲ ಸಾಧಿಸಿದ್ದವು.

ಇದಕ್ಕೂ ಮುನ್ನ ನಡೆದ ಮತ್ತೊಂದು ಕ್ವಾರ್ಟರ್‍ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ 2-1 ಗೋಲುಗಳಿಂದ ಜರ್ಮನಿಯನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments