Saturday, July 6, 2024
Google search engine
Homeತಾಜಾ ಸುದ್ದಿವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ 30 ರೂ. ಇಳಿಕೆ: ಇಂದಿನಿಂದಲೇ ಜಾರಿ!

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ 30 ರೂ. ಇಳಿಕೆ: ಇಂದಿನಿಂದಲೇ ಜಾರಿ!

ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ 30 ರೂ. ಕಡಿತ ಮಾಡಿದ್ದು, ಜುಲೈ 1ರಿಂದಲೇ ನೂತನ ದರ ಜಾರಿಗೆ ಬಂದಿದೆ.

ದೇಶಾದ್ಯಂತ ಎಲ್ಲಾ ನಗರಗಳಲ್ಲಿ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ದೆಹಲಿಯಲ್ಲಿ 1646 ರೂ. ಆಗಿದ್ದರೆ, ಕೋಲ್ಕತಾದಲ್ಲಿ 1756 ರೂ. ಹಾಗೂ ಮುಂಬೈನಲ್ಲಿ 1598 ರೂ. ಆಗಿದೆ.

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಇಳಿಕೆಯಿಂದ ಹೋಟೆಲ್ ಗಳಿಗೆ ಅನುಕೂಲವಾಗಲಿದ್ದು, ತಿಂಡಿ-ತಿನಿಸುಗಳ ದರದಲ್ಲಿ ಯಾವುದೇ ಇಳಿಕೆಯಾಗುವ ಸಾಧ್ಯತೆ ಇಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments