Friday, May 17, 2024
Google search engine
Homeತಾಜಾ ಸುದ್ದಿಗೋದ್ರೇಜ್ ಕುಟುಂಬ ಇಬ್ಭಾಗ: 127 ವರ್ಷಗಳಲ್ಲಿ ಮೊದಲ ಬಾರಿ ಬಿರುಕು!

ಗೋದ್ರೇಜ್ ಕುಟುಂಬ ಇಬ್ಭಾಗ: 127 ವರ್ಷಗಳಲ್ಲಿ ಮೊದಲ ಬಾರಿ ಬಿರುಕು!

ದೇಶದ ಖ್ಯಾತ ಗೋದ್ರೇಜ್ ಕಂಪನಿ ಒಡೆತನದ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದು, 127 ವರ್ಷಗಳ ನಂತರ ಮೊದಲ ಬಾರಿ ಕಂಪನಿ ಇಭ್ಭಾಗವಾಗಲಿದೆ.

ಗೋದ್ರೇಜ್ ಗ್ರೂಪ್ ಆಫ್ ಕಂಪನಿಸ್ ಇಭ್ಭಾಗವಾಗಲಿದ್ದು, ಆದಿ ಗೋದ್ರೇಜ್ (82), ಸೋದರ ನಾದಿರ್ (73) ಒಂದು ಗುಂಪಾದರೆ, ಜಮ್ಶೆಡ್ ಗೋದ್ರೇಜ್ (75) ಮತ್ತು ಸ್ಮಿತಾ ಗೋದ್ರೇಜ್ ಕ್ರಿಸ್ಟ್ ನಾ (74) ಮತ್ತೊಂದು ಗುಂಪಾಗಿ ಬೇರ್ಪಟ್ಟಿದ್ದಾರೆ.

ರಿಯಲ್ ಎಸ್ಟೇಟ್, ಸೋಪು ಮತ್ತು ಗೃಹಪಯೋಗಿ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಸಂಸ್ಥೆ ಹೊಂದಿರುವ ಗೋದ್ರೇಜ್ ಗ್ರೂಪ್ ಆಫ್ ಕಂಪನಿ ಬೇರ್ಪಡುವ ಬಗ್ಗೆ ಪರಸ್ಪರ ಒಪ್ಪಂದಕ್ಕೆ ಬಂದಿವೆ.

ಆದಿ ಗೋದ್ರೇಜ್ ಮತ್ತು ನಾದಿರ್ ಸೋದರರ ಗುಂಪು ಕೈಗಾರಿಕೆಗಳ ಒಡೆತನ ಪಡೆದಿದ್ದರೆ, ಸೋದರ ಸಂಬಂಧಿಗಳಾದ ಜಮ್ಶೆಡ್ ಮತ್ತು ಸ್ಮಿತಾ ಗುಂಪು ಮುಂಬೈನಲ್ಲಿರುವ 3400 ಚದರ ಅಡಿ ವಿಸ್ತೀರ್ಣದ ಪ್ರಮುಖ ನಿವೇಶನ, ಪಟ್ಟಿ ಮಾಡದ ಗೋದ್ರೇಜ್ ಅಂಡ್ ಬಾಯ್ಸಿ ಕಂಪನಿ, ಲ್ಯಾಂಡ್ ಬ್ಯಾಂಕ್ ಸೇರಿದಂತೆ ಇತರೆ ಕಂಪನಿಗಳ ಒಡೆತನ ಪಡೆದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments