Sunday, October 6, 2024
Google search engine
Homeತಾಜಾ ಸುದ್ದಿರೈಲ್ವೆ ನೌಕರರಿಗೆ ಸಿಹಿಸುದ್ದಿ: 12 ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ

ರೈಲ್ವೆ ನೌಕರರಿಗೆ ಸಿಹಿಸುದ್ದಿ: 12 ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ

ರೈಲ್ವೆ ನೌಕರರಿಗೆ ಕೇಂದ್ರ ಸರ್ಕಾರ ದೀಪಾವಳಿ ಬೋನಸ್ ಘೋಷಿಸಿದೆ. ಈ ಮೂಲಕ ನವರಾತ್ರಿ ಹಬ್ಬಕ್ಕೆ ಸಿಹಿಸುದ್ದಿ ನೀಡಿದೆ.

ರೈಲ್ವೆ ನೌಕರರ ಬಹುದಿನದ ಬೇಡಿಕೆಯಂತೆ 11.72 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯ ಪ್ರಕಟಿಸಿದ್ದು, ಉತ್ಪಾದಕತೆ ಆಧಾರಿತ ನೌಕರರಿಗೆ ಮಾತ್ರ 78 ದಿನಗಳ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ರೈಲ್ವೆ ಸಚಿವರಿಗೆ ದೀಪಾವಳಿ ಬೋನಸ್ ನೀಡಲು 2,028.57 ಕೋಟಿ ರೂ. ವೆಚ್ಚವಾಗಲಿದೆ. ರೈಲ್ವೇ ಉದ್ಯೋಗಿಗಳಿಗೆ ಬೋನಸ್ ಹಂಚಿಕೆ ಕುರಿತು ಹಿರಿಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಬೋನಸ್ ಪಡೆಯುವ ನೌಕರರ ವರ್ಗಗಳ ಹೆಸರನ್ನು ಸಹ ಹಂಚಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಟ್ರ್ಯಾಕ್ ಮೆಂಟೇನರ್ಸ್, ಲೋಕೋ ಪೈಲಟ್ಸ್, ರೈಲು ಮ್ಯಾನೇಜರ್ಸ್ (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್ಸ್​, ಸೂಪರ್​ವೈಸರ್ಸ್, ತಂತ್ರಜ್ಞರು, ಸಹಾಯಕರು ಸೇರಿದಂತೆ ವಿವಿಧ ಹಂತಗಳ ಅಧಿಕಾರಿಗಳಿ ಬೋನಸ್ ಪಡೆಯಲಿದ್ದಾರೆ.

ಬೋನಸ್ ಮೊತ್ತವನ್ನು ದೀಪಾವಳಿ ಅಥವಾ ದಸರಾ ಮೊದಲು ನೌಕರರ ಖಾತೆಗೆ ವರ್ಗಾಯಿಸಬಹುದು. ಪ್ರತಿಯೊಬ್ಬರಿಗೆ ಗರಿಷ್ಠ 17,951 ರೂ. ಬೋನಸ್ ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments