Monday, September 16, 2024
Google search engine
Homeಕ್ರೀಡೆಗಿಲ್-ಸಾಯಿ ದಾಖಲೆ ಜೊತೆಯಾಟ: ಚೆನ್ನೈಗೆ 232 ರನ್ ಗುರಿ ಒಡ್ಡಿದ ಗುಜರಾತ್ ಟೈಟಾನ್ಸ್!

ಗಿಲ್-ಸಾಯಿ ದಾಖಲೆ ಜೊತೆಯಾಟ: ಚೆನ್ನೈಗೆ 232 ರನ್ ಗುರಿ ಒಡ್ಡಿದ ಗುಜರಾತ್ ಟೈಟಾನ್ಸ್!

ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಸಿಡಿಸಿದ ಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 232 ರನ್ ಗುರಿ ಒಡ್ಡಿದೆ.

ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 231 ರನ್ ಸಂಪಾದಿಸಿತು.

ಪ್ಲೇಆಫ್ ರೇಸ್ ಗಾಗಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಪಂದ್ಯದಲ್ಲಿ ಗುಜರಾತ್ ಭರ್ಜರಿ ಆರಂಭ ಪಡೆಯಿತು. ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್ ಗೆ ದಾಖಲೆಯ 210 ರನ್ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ನೀಡಿದರು.

ಗಿಲ್ 55 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ ಸೇರಿದ ಶತಕ ಪೂರೈಸಿದರು. ಇದು ಗಿಲ್ ಗೆ 4ನೇ ಶತಕವಾಗಿದ್ದರೆ, ಐಪಿಎಲ್ ನ 100ನೇ ಶತಕ ಬಾರಿಸಿದ ಗೌರವಕ್ಕೆ ಗಿಲ್ ಪಾತ್ರರಾದರು. ಗಿಲ್ ಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 103 ರನ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments