Saturday, July 6, 2024
Google search engine
Homeತಾಜಾ ಸುದ್ದಿದೆಹಲಿಯಲ್ಲಿ ಭಾರೀ ಮಳೆಗೆ 4 ಮಕ್ಕಳು ಸೇರಿ 6 ಮಂದಿ ಬಲಿ

ದೆಹಲಿಯಲ್ಲಿ ಭಾರೀ ಮಳೆಗೆ 4 ಮಕ್ಕಳು ಸೇರಿ 6 ಮಂದಿ ಬಲಿ

ರಾಜಧಾನಿ ದೆಹಲಿ ಮುಂಗಾರಿನ ಮೊದಲ ಮಳೆಗೆ ತತ್ತರಿಸಿತ್ತು, ಪ್ರತ್ಯೇಕ ಪ್ರಕರಣಗಳಲ್ಲಿ 4 ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ಸುರಿದ ಭಾರೀ ಮಳೆಯಿಂದ ದೆಹಲಿಯ ಓಕ್ಲಾದಲ್ಲಿ ರಸ್ತೆಗಳು ತುಂಬಿ ಹರಿಯುತ್ತಿದ್ದು, 60 ವರ್ಷದ ವೃದ್ಧರೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಕೆಲವು ಗಂಟೆಗಳ ನಂತರ ಅವರ ಶವ ಪತ್ತೆಹಚ್ಚಲಾಗಿದೆ. ಜೈಪುರ್ ನ ದಿಗ್ವಿಜಯ್ ಕುಮಾರ್ ಚೌಧರಿ ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಉತ್ತರ ದೆಹಲಿಯ ಹೊರವರ್ತುಲ ರಸ್ತೆಯ ಸಮ್ಯಪುರ್ ಬಡ್ಲಿ ಎಂಬಲ್ಲಿ ಇಬ್ಬರು ಮಕ್ಕಳು ಅಂಡರ್ ಪಾಸ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣದ ಬಳಿ ಸುಮಾರು 2ರಿಂದ 3 ಅಡಿ ಎತ್ತರದಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಮಕ್ಕಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಆಟವಾಡುತ್ತಿದ್ದ 8 ಮತ್ತು 10 ವಯೋಮಿತಿಯ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಸ್ಮಾಪುರ್ ಬಡವಾಣೆಯಲ್ಲಿ ಸುಮಾರು 5 ಅಡಿ ಎತ್ತರದಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಮಕ್ಕಳು ಅಸುನೀಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments