ರಾಜ್ಯ ಸರ್ಕಾರ ಇದೀಗ ನಿವೇಶನ ಒಡೆತನಕ್ಕೆ ಇ-ಖಾತಾ ನಿಯಮ ಕಡ್ಡಾಯಗೊಳಿಸಿದ್ದು, ನಿವೇಶನ ಖರೀದಿ ಹಾಗೂ ಮಾರಾಟಕ್ಕೆ ಇ-ಖಾತಾವೇ ಅಧಿಕೃತ ದಾಖಲೆ ಆಗಲಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಪಡೆಯುವ ವಿಧಾನದ ಬಗ್ಗೆ ಅಧಿಕೃತ ಸಂಪೂರ್ಣ ಮಾಹಿತಿ ಇಲ್ಲಿದೆ.
- ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಗತ್ಯವಿಲ್ಲದ ನಾಗರಿಕರು ಅಂತಿಮ ಇಖಾತಾ ಪಡೆಯಲು ಆತುರ ಅಗತ್ಯವಿಲ್ಲ. ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ ಮತ್ತು ನಂತರ ನಿಮ್ಮ ಅನುಕೂಲಕರ ಸಮಯದಲ್ಲಿ ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಿ.
ತುರ್ತಾಗಿ ಮಾರಾಟ/ವ್ಯವಹಾರ ಮಾಡಬೇಕಾದವರು, ತ್ವರಿತ ಅಂತಿಮ ಇಖಾತಾಗಾಗಿ ಪಾಲಿಕೆಯ ಸಹಾಯವಾಣಿ ಲಭ್ಯವಿರುತ್ತದೆ.
- ಪಾಲಿಕೆಯು ಪ್ರತಿಯೊಬ್ಬ ನಾಗರಿಕರು ತಾವೇ ತಮ್ಮ ಇಖಾತಾವನ್ನು ಆನ್ಲೈನ್ನಲ್ಲಿ https://BBMPeAasthi.karnataka.gov.in ನಲ್ಲಿ ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ವಿನಂತಿಸುತ್ತದೆ.
- ತರಬೇತಿ ವೀಡಿಯೊ ಮೂಲಕ ಸ್ವತಃ ನೀವೇ ಇ-ಖಾತಾ ಪಡೆಯಿರಿ.
(ನಾಗರಿಕನು ತಮ್ಮ ಸುತ್ತಲಿನಲ್ಲಿರುವ ಯಾರಿಂದಾದರೂ ಸಹಾಯ ಪಡೆದುಕೊಳ್ಳಬಹುದು)
ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT
ಕನ್ನಡ: https://youtu.be/JR3BxET46po?si=jDoSKqy2V1IFUpf6
- ಮೂಲಭೂತವಾಗಿ ನಾಗರಿಕರು ಆನ್ಲೈನ್ನಲ್ಲಿ ಕೆಲವೇ ಸಂಖ್ಯೆಗಳನ್ನು ನಮೂದಿಸಬೇಕು
ನೋಂದಾಯಿತ ಡೀಡ್ ಸಂಖ್ಯೆ(ಉಪ ರಿಜಿಸ್ಟ್ರಾರ್ನಿಂದ ವಿದ್ಯುನ್ಮಾನವಾಗಿ ಪಡೆಯಲಾಗಿದೆ. ಆದರೆ ಪೂರ್ವಜರ/ಪಿತ್ರಾರ್ಜಿತ ಆಸ್ತಿಯನ್ನು ಬೈಪಾಸ್ ಮಾಡಲು ಅನುಮತಿಸಿದೆ)
ಪಾಲಿಕೆಯ ಆಸ್ತಿ ತೆರಿಗೆ ಎಸ್.ಎ.ಎಸ್ ಸಂಖ್ಯೆ (ತೆರಿಗೆ ಡೇಟಾಬೇಸ್ನಿಂದ ವಿದ್ಯುನ್ಮಾನವಾಗಿ ಪಡೆಯಲಾಗಿದೆ)
ಆಧಾರ್ (eKYC ಆನ್ಲೈನ್ ಮುಖೇನ ಮಾಡಲಾಗುವುದು)
ಬೆಸ್ಕಾಂ 10-ಅಂಕಿಯ ಸಂಖ್ಯೆ (ಖಾಲಿ ಸೈಟ್ಗಳಿಗೆ ಐಚ್ಛಿಕ)
- ನಿಮ್ಮ ಎ-ಖಾತಾವನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡಲು ಪಾಲಿಕೆಯು ಪ್ರೋತ್ಸಾಹಿಸಿದರೂ ಇತರ ಪ್ರತಿಯೊಂದು ಡಾಕ್ಯುಮೆಂಟ್ ಐಚ್ಛಿಕವಾಗಿರುತ್ತದೆ. ಆ ದಾಖಲೆಗಳು ಇಲ್ಲದಿದ್ದರೂ ಅಸ್ತಿತ್ವದಲ್ಲಿರುವ ಪಾಲಿಕೆಯ ದಾಖಲೆ ಪ್ರಕಾರ ಎ-ಖಾತಾ ಅಥವಾ ಬಿ-ಖಾತಾವನ್ನು ನಾಗರಿಕರು ಪಡೆಯುತ್ತಾರೆ.
- ಬೆಂಗಳೂರು ಒನ್ ಕೇಂದ್ರವು ನಾಗರಿಕರ ಅನುಕೂಲಕ್ಕಾಗಿ ಹೆಚ್ಚುವರಿ ಆಯ್ಕೆಯಾಗಿದೆ.
- ಆಧಾರ್ ಇಲ್ಲದ ಯಾರಾದರೂ ಚಾಲನಾ ಪರವಾನಗಿ ಅಥವಾ ಪಾಸ್ಪೋರ್ಟ್ ಅಥವಾ ವೋಟರ್ ಗುರುತಿನ ಚೀಟಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.