ಕ್ಷುಲಕ ಕಾರಣಕ್ಕೆ ಪತ್ನಿಯ ರುಂಡ-ಮುಂಡ ಬೇರ್ಪಡಿಸಿ ಪತಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಹುಲಿಯೂರುದುರ್ಗಾದಲ್ಲಿ ಈ ಘಟನೆ ನಡೆದಿದ್ದು, ಪುಷ್ಪ (32) ಹತ್ಯೆಯಾಗಿದ್ದು, ಪತಿ ಶಿವರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಪುಷ್ಪ ಮತ್ತು ಶಿವರಾಂ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದು, ದಂಪತಿ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿ ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಆಗಿದ್ದು ಶಿವರಾಮ್ ಮಾರಕಾಸ್ತ್ರದಿಂದ ಪುಷ್ಪಾಗಳನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದಾನೆ.
ಹುಲಿಯೂರು ದುರ್ಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.