Saturday, September 28, 2024
Google search engine
Homeಅಪರಾಧಡಿವೋರ್ಸ್ ಕೇಳಿದ ಪತ್ನಿಗೆ ಆಸಿಡ್ ಎರಚಿ ಪತಿ ವಿಕೃತಿ!

ಡಿವೋರ್ಸ್ ಕೇಳಿದ ಪತ್ನಿಗೆ ಆಸಿಡ್ ಎರಚಿ ಪತಿ ವಿಕೃತಿ!

ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಡಿವೋರ್ಸ್ ಕೇಳಿದ್ದಕ್ಕೆ ಪತ್ನಿಯ ಮುಖದ ಮೇಲೆ ಪತಿ ಆಸಿಡ್ ಎರಚಿ ವಿಕೃತಿ ಮೆರೆದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಮಲಡ್ ನ ನಿವಾಸಿಯಾಗಿರುವ 27 ವರ್ಷದ ಪತ್ನಿ ಮೇಲೆ 34 ವರ್ಷದ ಪತಿ ಬುಧವಾರ ಆಸಿಡ್ ಎರಚಿದ್ದಾನೆ. ಮುಖ ಸುಟ್ಟು ಹೋಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

2019ರಲ್ಲಿ ಮಹಿಳೆ ಪತಿಗೆ ಅನೈತಿಕ ಸಂಬಂಧವಿದೆ ಎಂಬ ಕಾರಣಕ್ಕೆ ತವರು ಮನೆಗೆ ಮರಳಿದ್ದು ತಾಯಿಯ ಜೊತೆ ವಾಸವಾಗಿದ್ದಳು. ಪತಿಗೆ ಅನೈತಿಕ ಸಂಬಂಧ ಇದ್ದಿದ್ದು ಅಲ್ಲದೇ ಡ್ರಗ್ಸ್ ದಾಸನಾಗಿದ್ದು, ಕೆಲಸ ಇಲ್ಲದೇ ನಿರುದ್ಯೋಗಿ ಆಗಿದ್ದ ಎಂಬುದು ಆಕೆಗೆ ತಿಳಿದ ಹಿನ್ನೆಲೆಯಲ್ಲಿ ಗಂಡನನ್ನು ತೊರೆದು ಡಿವೋರ್ಸ್ ಗೆ ಮೊರೆ ಹೋಗಿದ್ದಳು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಂಡನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments