Home ತಾಜಾ ಸುದ್ದಿ ಈ ದೇಶದಲ್ಲಿ ಊಟ ಬೇಕು ಅಂದರೆ ಸೈನಿಕರ ಜೊತೆ ಮಲಗಬೇಕು!

ಈ ದೇಶದಲ್ಲಿ ಊಟ ಬೇಕು ಅಂದರೆ ಸೈನಿಕರ ಜೊತೆ ಮಲಗಬೇಕು!

by Editor
0 comments
women

ಯುದ್ಧಪೀಡಿತ ಸೂಡಾನ್ ದೇಶದಲ್ಲಿ ಕುಟುಂಬದ ನಿರ್ವಹಣೆಗಾಗಿ ಆಹಾರ ಬೇಕಾದರೆ ಮಹಿಳೆಯರು ಯೋಧರ ಜೊತೆ ಮಲಗುವಂತೆ ಒತ್ತಡ ಹೇರಲಾಗುತ್ತಿದೆ.

ಸುಡಾನ್ ನ ಒಮ್ರುಮನ್ ನಗರದ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ತಾವು ಕೇವಲ ಕುಟುಂಬ ಹೊಟ್ಟೆ ತುಂಬಿಸಲು ಆಹಾರ ಮುಂತಾದ ಅಗತ್ಯ ವಸ್ತುಗಳನ್ನು ಪಡೆಯಲು ಸೈನಿಕರ ಜೊತೆ ದೇಹ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಆಹಾರ ಸಂಗ್ರಹಿಸುವ ಉಗ್ರಾಣ ಸೇರಿದಂತೆ ಕಾರ್ಖಾನೆಗಳು ಸೈನಿಕರ ವಶದಲ್ಲಿದೆ. ಇದರಿಂದ ದೇಶದ ಜನರು ಆಹಾರಕ್ಕಾಗಿ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈನಿಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ.

ನನ್ನ ಹೆತ್ತವರಿಗೆ ತುಂಬಾ ವಯಸ್ಸಾಗಿದೆ. ಅವರಿಗೆ ಆರೋಗ್ಯ ಬೇರೆಸರಿಯಿಲ್ಲ. ಆಹಾರಕ್ಕಾಗಿ ನಮ್ಮ ಮಗಳನ್ನು ಕಳುಹಿಸಲು ಇಷ್ಟವಿಲ್ಲ. ಆಹಾರ ಪಡೆಯುವ ಏಕೈಕ ಉದ್ದೇಶದಿಂದ ನಾನೇ ಸೈನಿಕರ ಬಳಿ ಹೋದೆ ಎಂದು ಮಹಿಳೆಯೊಬ್ಬರು ತಮ್ಮ ಕಹಿ ಅನುಭವವನ್ನು ಗಾರ್ಡಿಯನ್ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

banner

ಕಳೆದ ವರ್ಷ ಮೇ ತಿಂಗಳಿನಿಂದ ಆಹಾರ ಸಂಸ್ಕರಣ ಕಾರ್ಖಾನೆಗಳಲ್ಲಿ ಸೈನಿಕರು ದೌರ್ಜನ್ಯ ಎಸಗುತ್ತಿದ್ದಾರೆ. ಆಹಾರ ವಸ್ತುಗಳು ಬೇಕು ಅಂದರೆ ಸೈನಿಕರ ಜೊತೆ ಸೆಕ್ಸ್ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಸೂಡಾನ್ ನಲ್ಲಿ ನಾಗರಿಕ ಧಂಗೆ ಶುರುವಾದ ಹಿನ್ನೆಲೆಯಲ್ಲಿ ಪ್ಯಾರಾ ಮಿಲಿಟರಿ ಹೇರಲಾಗಿದ್ದು, ದೇಶದ ಪ್ರಮುಖ ಫ್ಯಾಕ್ಟರಿ ಆವರಿಸಿಕೊಂಡಿರುವ ಸೈನಿಕರು ಊಟ ಬೇಕಾದರೆ ಸೆಕ್ಸ್ ಮಾಡಿ ಎಂದು ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
Test ranking ಅಗ್ರಸ್ಥಾನಕ್ಕೆ ಮರಳಿದ ಬುಮ್ರಾ, 2ನೇ ಸ್ಥಾನಕ್ಕೆ ಜಿಗಿದ ಜೈಸ್ವಾಲ್ ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ? World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ