Saturday, October 5, 2024
Google search engine
Homeತಾಜಾ ಸುದ್ದಿಇಂಡಿಯನ್-2 ಟ್ರೇಲರ್ ಬಿಡುಗಡೆ: ಸೇನಾಪತಿಯಲ್ಲಿ ಕಮಲ್ ಮತ್ತೆ ಕಮಾಲ್!

ಇಂಡಿಯನ್-2 ಟ್ರೇಲರ್ ಬಿಡುಗಡೆ: ಸೇನಾಪತಿಯಲ್ಲಿ ಕಮಲ್ ಮತ್ತೆ ಕಮಾಲ್!

ಸಂಚಲನ ಮೂಡಿಸಿದ್ದ ಇಂಡಿಯನ್ ಚಿತ್ರದ ಎರಡನೇ ಭಾಗದ ಟ್ರೇಲರ್ ಬಿಡುಗಡೆ ಆಗಿದ್ದು, ನಿರ್ದೇಶಕ ಶಂಕರ್ ಮತ್ತು ಸಕಲಕಲಾವಲ್ಲಭ ಕಮಲ್ ಹಾಸನ್ ಮತ್ತೊಮ್ಮೆ ತೆರೆಮರೆಯ ಮೇಲೆ ಕಮಾಲ್ ಮಾಡುವ ಭರವಸೆ ಮೂಡಿಸಿದ್ದಾರೆ.

1996ರಲ್ಲಿ ಬಿಡುಗಡೆ ಆಗಿದ್ದ ಇಂಡಿಯನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಕಮಲ್ ಹಾಸನ್ ಈ ಬಾರಿ ಸೇತುಪತಿಯಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯನ್-2 ಚಿತ್ರದಲ್ಲಿ ಸಿದ್ಧಾರ್ಥ್ ನಟಿಸಿದ್ದಾರೆ.

ಇಂಡಿಯನ್-2 ಚಿತ್ರ ಹಿಂದಿ ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು, ಟ್ರೇಲರ್ ಬಿಡುಗಡೆ ಆದ 2 ಗಂಟೆಯಲ್ಲಿ 6 ದಶಲಕ್ಷ ವೀಕ್ಷಣೆ ಆಗಿ ದಾಖಲೆ ಬರೆದಿದೆ.

ರೊಬೊ ನಂತರ ಶಂಕರ್ ನಿರ್ದೇಶಿಸುತ್ತಿರುವ ಎರಡನೇ ಸರಣಿ ಚಿತ್ರವಾಗಿದೆ. ಇಂಡಿಯನ್-2 ಚಿತ್ರದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಭಾರತೀಯ ಚುನಾವಣಾ ವ್ಯವಸ್ಥೆ ಹಾಗೂ ಇವಿಎಂ ಕುರಿತು ಕಥೆ ಹೊಂದಿದೆ ಎಂದು ಹೇಳಲಾಗಿದೆ.

ಇಂಡಿಯನ್ ಚಿತ್ರದಲ್ಲಿ ಸೇತುಪತಿಯಾಗಿ ಕಾಣಿಸಿಕೊಂಡಿದ್ದ ಕಮಲ್ ಹಾಸನ್ ಈಗ ಇನ್ನಷ್ಟು ಚೆನ್ನಾಗಿ ಕಾಣಿಸಿದ್ದಾರೆ ಎನ್ನಲಾಗಿದೆ. ಇಂಡಿಯನ್ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರೆ ಈ ಬಾರಿ ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments