Friday, September 20, 2024
Google search engine
Homeಕ್ರೀಡೆಜೂ.6 ಕೊನೆ ಪಂದ್ಯ ಆಡಲಿರುವ ಭಾರತದ ಫುಟ್ಬಾಲ್ ದಂತಕತೆ ಸುನೀಲ್ ಛೆಟ್ರಿ

ಜೂ.6 ಕೊನೆ ಪಂದ್ಯ ಆಡಲಿರುವ ಭಾರತದ ಫುಟ್ಬಾಲ್ ದಂತಕತೆ ಸುನೀಲ್ ಛೆಟ್ರಿ

ಭಾರತದ ಫುಟ್ಬಾಲ್ ದಂತಕತೆ ಸುನೀಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಘೋಷಿಸಿದ್ದು, ಜೂನ್ 6ರಂದು ಭಾರತದ ಪರ ಕೊನೆಯ ಪಂದ್ಯವಾಡಲಿದ್ದಾರೆ.

ಜೂನ್ 6ರಂದು ಕೋಲ್ಕತಾದಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಅಹರ್ತಾ ಸುತ್ತಿನ ಪಂದ್ಯದಲ್ಲಿ ಸುನೀಲ್ ಛೆಟ್ರಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಸುನೀಲ್ ಛೆಟ್ರಿ ಸಾಮಾಜಿಕ ಜಾಲತಾಣದಲ್ಲಿ ಫುಟ್ಬಾಲ್ ಗೆ ವಿದಾಯ ಘೋಷಿಸಿದ್ದಾರೆ. ಕಳೆದ 19 ವರ್ಷಗಳಿಂದ ಭಾರತ ತಂಡದ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದಕ್ಕೆ ಧನ್ಯವಾದಗಳು. ನಾನು ಹಲವಾರು ತಪ್ಪುಗಳನ್ನು ಮಾಡಿದ್ದೇನೆ. ಕಳೆದ ಎರಡೂವರೆ ತಿಂಗಳು ಕುತೂಹಲವಾಗಿತ್ತು. ಮುಂದಿನ ಪಂದ್ಯ ನನ್ನ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತ ತಂಡ ಏಷ್ಯಾದ ಎ ಗುಂಪಿನಲ್ಲಿ ಕತಾರ್ ನಂತರದ ಎರಡನೇ ಸ್ಥಾನದಲ್ಲಿ ಭಾರತ ಇದೆ. 39 ವರ್ಷದ ಸುನೀಲ್ ಛೆಟ್ರಿ ಪ್ರಸ್ತುತ ಭಾರತ ತಂಡದ ನಾಯಕರಾಗಿದ್ದು, ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments