Monday, July 22, 2024
Google search engine
Homeಅಪರಾಧವೀಡಿಯೋ ಕಾಲ್ ಮಾಡಿ ಪತ್ನಿಗೆ ಬೆದರಿಸಲು ಹೋಗಿ ಜಿಮ್ ಟ್ರೈನರ್ ಸಾವು!

ವೀಡಿಯೋ ಕಾಲ್ ಮಾಡಿ ಪತ್ನಿಗೆ ಬೆದರಿಸಲು ಹೋಗಿ ಜಿಮ್ ಟ್ರೈನರ್ ಸಾವು!

ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಗೆ ಹೆದರಿಸಲು ಯತ್ನಿಸಿದ ಜಿಮ್ ಟ್ರೈನರ್ ಸಾವಿಗೀಡಾದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ಸಂಭವಿಸಿದೆ.

ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಬಿಹಾರ ಮೂಲದ ಅಮಿತ್ ಕುಮಾರ್ (28) ಎಂದು ಗುರುತಿಸಲಾಗಿದೆ.

ಹಾಸನ ಮೂಲದ ಯುವತಿಯನ್ನು ಮದುವೆಯಾಗಿದ್ದ ಅಮಿತ್, ಇತ್ತೀಚೆಗೆ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಬೇಸರಗೊಂಡು ತವರು ಮನೆಗೆ ಹೋಗಿದ್ದ ಪತ್ನಿಗೆ ವೀಡಿಯೋ ಕಾಲ್ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದು, ನೇಣು ಬಿಗಿದುಕೊಂಡಿದೆ. ಇದರಿಂದ ಅಮಿತ್ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆ ಅಮಿತ್ ಯುವತಿಯನ್ನು ಮದುವೆಯಾಗಿದ್ದ. ಮೂರು ತಿಂಗಳ ಹಿಂದೆ ಅಮಿತ್ ಪತ್ನಿ ನರ್ಸಿಂಗ್ ಕೆಲಸಕ್ಕೆ ಸೇರಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳ ನಡೆದಿತ್ತು. ಇದಾದ ಬಳಿ ಆಕೆ ತವರು ಮನೆ ಸೇರಿದ್ದಳು. ಕಳೆದ ವಾರ ಆಕೆಯನ್ನು ಕರೆದುಕೊಂಡು ಬಂದಿದ್ದ ಅಮಿತ್ ಮತ್ತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಮನನೊಂದ ಮಹಿಳೆ ಮರಳಿ ತವರು ಮನೆಗೆ ಹೋಗಿದ್ದಳು.

ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments