Thursday, September 19, 2024
Google search engine
Homeಕ್ರೀಡೆಪ್ಯಾರಾಲಿಂಪಿಕ್ಸ್: ಹೈಜಂಪಲ್ಲಿ ಬೆಳ್ಳಿ ಗೆದ್ದ ಭಾರತದ ನಿಶಾದ್!

ಪ್ಯಾರಾಲಿಂಪಿಕ್ಸ್: ಹೈಜಂಪಲ್ಲಿ ಬೆಳ್ಳಿ ಗೆದ್ದ ಭಾರತದ ನಿಶಾದ್!

ಭಾರತದ ನಿಶಾದ್ ಕುಮಾರ್ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ ಟಿ 47 ಹೈಜಂಪ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಈ ಮೂಲಕ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಭಾರತ 3 ಪದಕ ಗೆದ್ದ ಸಾಧನೆ ಮಾಡಿತು.

ಇದಕ್ಕೂ ಮುನ್ನ ಪ್ರೀತಿ ಪಾಲ್ 100 ಮೀ. ಮತ್ತು 200 ಮೀ. ಓಟದ ಸ್ಪರ್ಧೆಯಲ್ಲಿ 2 ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಇದರೊಂದಿಗೆ ಭಾರತದ ಪದಕದ ಬೇಟೆ 8ಕ್ಕೇರಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಕನಿಷ್ಠ 2 ಬೆಳ್ಳಿ ಪದಕ ಖಚಿತಗೊಂಡಿವೆ.

ಟೊಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನಿಶಾದ್ ಈ ಬಾರಿಯೂ 2.04 ಮೀ. ಜಿಗಿದು ಬೆಳ್ಳಿ ಪದಕಕ್ಕೆ ಕೊರಳೋಡ್ಡಿದರು.

ಅಮೆರಿಕದ ರೋಡ್ರಿಕ್ ಟೌನ್ ಸೆಂಡ್ ಚಿನ್ನದ ಪದಕ ಉಳಿಸಿಕೊಂಡರು. 2.16 ಮೀ. ಎತ್ತರ ಜಿಗಿದು ವಿಶ್ವದಾಖಲೆ ಪ್ರಯತ್ನ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments