Saturday, July 6, 2024
Google search engine
Homeಕ್ರೀಡೆIPL 2024: ಚೆನ್ನೈ ಸೂಪರ್ ಕಿಂಗ್ಸ್ ಗೆ ಸುಲಭ ತುತ್ತಾದ ಗುಜರಾತ್ ಟೈಟಾನ್ಸ್

IPL 2024: ಚೆನ್ನೈ ಸೂಪರ್ ಕಿಂಗ್ಸ್ ಗೆ ಸುಲಭ ತುತ್ತಾದ ಗುಜರಾತ್ ಟೈಟಾನ್ಸ್

ರನ್ ಹೊಳೆ ಹರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮುಂದೆ ಗುಜರಾತ್ ಟೈಟಾನ್ಸ್ 63 ರನ್ ಗಳ ಭಾರೀ ಅಂತರದಿಂದ ಮಣಿದಿದೆ. ಈ ಮೂಲಕ ಚೆನ್ನೈ ಸತತ 2ನೇ ಗೆಲುವು ದಾಖಲಿಸಿದೆ. ಗುಜರಾತ್ ಗೆ ಮೊದಲ ಸೋಲಾಗಿದೆ.

ವಿಕೆಟ್ ಕಳೆದುಕೊಂಡು 206 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಗುಜರಾತ್ ಟೈಟಾನ್ಸ್ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಸಾಯಿ ಸುದರ್ಶನ್ (37), ವೃದ್ಧಿಮಾನ್ ಸಾಹ (21) ಮತ್ತು ಡೇವಿಡ್ ಮಿಲ್ಲರ್ (21) ಮಾತ್ರ ತಕ್ಕಮಟ್ಟಿಗೆ ಹೋರಾಟ ನಡೆಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಪರ ಶಿವಂ ದುಬೆ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 51 ರನ್ ಸಿಡಿಸಿದರೆ, ಋತುರಾಜ್ ಗಾಯಕ್ವಾಡ್ (46) ಮತ್ತು ರಚಿತ್ ರವಿಂದ್ರ (46) ತಂಡಕ್ಕೆ ಮಿಂಚಿನ ಆರಂಭ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments