Saturday, July 6, 2024
Google search engine
Homeಕ್ರೀಡೆಯುರೋ ಕಪ್: ಸ್ಪೇನ್ ಗೆ ಗೋಲಿನ ಉಡುಗೊರೆ ನೀಡಿ ಸೋತ ಇಟಲಿ!

ಯುರೋ ಕಪ್: ಸ್ಪೇನ್ ಗೆ ಗೋಲಿನ ಉಡುಗೊರೆ ನೀಡಿ ಸೋತ ಇಟಲಿ!

ಜಿದ್ದಾಜಿದ್ದಿನ ಪಂದ್ಯದಲ್ಲಿ ರಿಕಾರ್ಡೊ ಕಾಲಫಿರೋಯ್ ಬಾರಿಸಿದ ಸ್ವಯಂ ಗೋಲಿನಿಂದ ಇಟಲಿ ತಂಡ ಯುರೋ ಕಪ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ವಿರುದ್ಧ ಸೋಲುಂಡಿತು.

ಗುರುವಾರ ತಡರಾತ್ರಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಎರಡು ತಂಡಗಳ ನಡುವೆ ಉತ್ತಮ ಪೈಪೋಟಿ ಕಂಡು ಬಂದಿತು. ಆದರೆ ಇಟಲಿಯ ರಿಕಾರ್ಡೊ ಕಾಲಫಿರೋಯ್ ಪಂದ್ಯದ 45ನೇ ನಿಮಿಷದಲ್ಲಿ ಸ್ವಯಂ ಗೋಲು ಬಾರಿಸಿ ಗೆಲುವಿನ ಉಡುಗೊರೆ ನೀಡಿತು.

ಮಾಜಿ ವಿಶ್ವ ಚಾಂಪಿಯನ್ ಸ್ಪೇನ್ ಹಾಟ್ ಫೇವರಿಟ್ ಆಗಿದ್ದರೂ ಇಟಲಿ ಉತ್ತಮ ಪೈಪೋಟಿ ನೀಡಿತು. ಸ್ಪೇನ್ ಆಟಗಾರರು ಇಟಲಿಯ ಮೇಲೆ ಪದೇಪದೆ ದಾಳಿ ಸಂಘಟಿಸಿದರೂ ಗೋಲು ಗಳಿಸಲು ವಿಫಲವಾದರು. ಆದರೆ ಸಿಕ್ಕ ಏಕೈಕ ಗೋಲಿನ ಉಡುಗೊರೆಯಿಂದ ಗೆಲುವಿನ ನಿಟ್ಟುಸಿರು ಬಿಟ್ಟಿತು.

ಈ ಗೆಲುವಿನೊಂದಿಗೆ ಸ್ಪೇನ್ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಇಟಲಿ ಎರಡನೇ ಸ್ಥಾನದಲ್ಲೇ ಉಳಿಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments