ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ನಾಲ್ವರು ಉಗ್ರರ ಫೋಟೊವನ್ನು ತನಿಖಾ ಸಂಸ್ಥೆಗಳು ಬಿಡುಗಡೆ ಮಾಡಿವೆ.
ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿದ ನಾಲ್ವರು ಉಗ್ರರ ಪೈಕಿ ಇಬ್ಬರು ವಿದೇಶೀಯರು ಇದ್ದಾರೆ. ಆಸೀಫ್ ಫೌಜಿ, ಸುಲೇಮಾನ್ ಶಾಹ್, ಅಬು ತಲ್ಹಾ ಎಂಬ ಮೂವರು ಗುರುತು ಪತ್ತೆಯಾಗಿದ್ದು, ಮತ್ತೊಬ್ಬ ವಿವರ ತಿಳಿದು ಬಂದಿಲ್ಲ.
ನಾಲ್ವರು ಉಗ್ರರ ಬಳಿ 3 ಎಕೆ-47 ಮತ್ತು ಎಂ4 ರೈಫಲ್ ಇವೆ. ನಾಲ್ವರ ಪೈಕಿ ಇಬ್ಬರು ಲಷ್ಕರೆ ಇ-ತೊಯ್ಬಾ ಸಂಘಟನೆಗೆ ಸೇರಿದ್ದು, ಇಬ್ಬರು ವಿದೇಶೀಯರಾಗಿದ್ದಾರೆ.
ಘಟನೆಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರೆ ಇ-ತೋಯ್ಬಾ ಹೊತ್ತುಕೊಂಡಿದ್ದು, ಭಾರತೀಯ ಸೇನೆ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆ ಆರಂಭಿಸಿದೆ.


