Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಬೆಂಗಳೂರು

ಬೆಂಗಳೂರಿನಲ್ಲಿ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ಆರಂಭ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 20 ವೀಕ್ಷಣೆಗಳು

ಬೆಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ (ಕಂಪನಿ ಮಾಲೀಕತ್ವದ ಮತ್ತು ಕಂಪನಿ ನಿರ್ವಹಣೆಯ ಎಕ್ಸ್ಪೀರಿಯೆನ್ಸ್ ಸ್ಟೋರ್) ಪ್ರಾರಂಭಿಸಿದೆ.

ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಟುಡಿಯೊಗಳ ಯಶಸ್ವಿ ಪ್ರಾರಂಭದ ನಂತರ ಈ ವಿಸ್ತರಣೆಯು ಪೇಂಟ್ ಮತ್ತು ಅಲಂಕರಣದ ಉದ್ಯಮವನ್ನು ಆವಿಷ್ಕಾರ, ಪ್ರೀಮಿಯಂ ಕೊಡುಗೆಗಳು ಮತ್ತು ನೈಜ ತಲ್ಲೀನಗೊಳಿಸುವ ಗ್ರಾಹಕರ ಅನುಭವಕ್ಕೆ ಪರಿವರ್ತಿಸುವ ಬ್ರಾಂಡ್ ನ ಬದ್ಧತೆಯನ್ನು ಮರು ದೃಢೀಕರಿಸಿದೆ.

ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರು ಸ್ಟುಡಿಯೊವನ್ನು ಸಾಮಾನ್ಯ ರೀಟೇಲ್ ಪ್ರಯಾಣವನ್ನು ಸ್ಫೂರ್ತಿದಾಯಕ, ತಲ್ಲೀನಗೊಳಿಸುವ ಅನುಭವವಾಗಿ ಪರಿವರ್ತಿಸಲು ಆಲೋಚನಾಪೂರ್ವಕವಾಗಿ ರೂಪಿಸಲಾಗಿದೆ.

ಪೇಂಟ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳ ಆಚೆಗೆ ಮುಂದುವರಿದಿವೆ. ಇದು ಎಕ್ಸ್ಪೀರಿಯೆನ್ಸ್ ಸೆಂಟರ್ ಆಗಿದ್ದು ಇದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದೇ ಅಲ್ಲದೆ ಬಣ್ಣಗಳನ್ನು ನಿಜ ಜೀವನದ ಪರಿಸರದಲ್ಲಿ ಮುಟ್ಟುವ, ಭಾವಿಸುವ ಮತ್ತು ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಗ್ರಾಹಕರು ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳು ಮೂಲಕ ಉಚಿತ ಪರಿಣಿತರ ಮಾರ್ಗದೆರ್ಶನ ಪಡೆದುಕೊಳ್ಳಬಹುದು,

ಸುಧಾರಿತ ವಿಶುಯಲೈಸೇಷನ್ ಸಾಧನಗಳು ಗೃಹ ಮಾಲೀಕರಿಗೆ ಅವರ ಆಯ್ಕೆ ಮಾಡಲಾದ ಬಣ್ಣಗಳು ನಿಜ ಜೀವನದ ಹಿನ್ನೆಲೆಗಳಲ್ಲಿ ಹೇಗೆ ಕಾಣುತ್ತವೆ ಎಂದು ಪ್ರಿವ್ಯೂ ಮಾಡಬಹುದು. ಪೇಂಟ್ಸ್ ಆಚೆಗೂ ಪೇಂಟ್ ಸ್ಟುಡಿಯೋ ವಾಲ್ ಪೇಪರ್ ಗಳು, ಡಿಸೈನರ್ ಫಿನಿಷ್ ಗಳು ಮತ್ತು ಸಮಗ್ರ ಅಲಂಕರಣದ ಪರಿಹಾರಕ್ಕೆ ವಿಶೇಷ ಕೋಟಿಂಗ್ ಆಯ್ಕೆಗಳನ್ನು ಕೂಡಾ ಹೊಂದಿರುತ್ತದೆ.

ಈ ಮಳಿಗೆಯು ಪೂರ್ಣ ಶ್ರೇಣಿಯ 170+ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ, ಅದರಲ್ಲಿ ಬಣ್ಣದ ಆಯ್ಕೆ, ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಶ್ರೀಮಂತ ಸ್ಥಳೀಯ ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕೊರ್ ಪರಿಹಾರಗಳನ್ನು ಕುರಿತು ಪರಿಣಿತರ ಸಲಹೆಗಳನ್ನೂ ಪಡೆಯಬಹುದು. ಈ ಪ್ರಾರಂಭವು ಬಿರ್ಲಾ ಓಪಸ್ ಪೇಂಟ್ಸ್ ಭಾರತದಾದ್ಯಂತ ತನ್ನ ರೀಟೇಲ್ ವ್ಯಾಪ್ತಿ ವಿಸ್ತರಿಸುವ ಪ್ರಗತಿಯ ಕಾರ್ಯತಂತ್ರದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಅನುಭವಪೂರ್ವಕ ರೀಟೇಲ್ ಗೆ ಹೆಚ್ಚು ಆದ್ಯತೆ ನೀಡಿ ಕಂಪನಿಯು ಮುಂದಿನ ತಿಂಗಳುಗಳಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಗಳಲ್ಲಿ ಹೆಚ್ಚುವರಿ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ತೆರೆಯಲು ಯೋಜಿಸಿದೆ.

ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ಶ್ರೀ ರಕ್ಷಿತ್ ಹರ್ಗವೆ, “ಬೆಂಗಳೂರಿನಲ್ಲಿ ನಮ್ಮ ಮೊದಲ ಪೇಂಟ್ ಸ್ಟುಡಿಯೊ ಪ್ರಾರಂಭಿಸುವುದು ಬಿರ್ಲಾ ಓಪಸ್ ಪೇಂಟ್ಸ್ ಗೆ ಪ್ರಮುಖ ಮೈಲಿಗಲ್ಲಾಗಿದೆ. ಈ ಸ್ಟುಡಿಯೊ ಬರೀ ಭೌತಿಕ ತಾಣಕ್ಕಿಂತ ಹೆಚ್ಚಿನದಾಗಿದೆ; ಇದು ಆವಿಷ್ಕಾರ, ಶ್ರೇಷ್ಠತೆ ಮತ್ತು ಗ್ರಾಹಕರ ಅನುಭವ ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರತಿ ಅಂಶವನ್ನೂ ಗೃಹ ಮಾಲೀಕರು ಅವರ ಸ್ಥಳಗಳನ್ನು ನೈಜ ಮಾಸ್ಟರ್ ಪೀಸ್ ಗಳಾಗಿ ಪರಿವರ್ತಿಸಲು ಸನ್ನದ್ಧವಾಗಿಸುವಂತೆ ಎಚ್ಚರಿಕೆಯಿಂದ ರೂಪಿಸಲಾಗಿದೆ.

ನಮ್ಮ ಗುರಿ ಗ್ರಾಹಕರು ಪೇಂಟ್ಸ್ ನ ಪರಿವರ್ತನೀಯ ಶಕ್ತಿಯನ್ನು ಪೂರ್ಣವಾಗಿ ಅನುಭವಿಸುವ ಪರಿಸರಗಳನ್ನು ಸೃಷ್ಟಿಸುವ ಮೂಲಕ ಅದನ್ನು ಲಭ್ಯ ಹಾಗೂ ಸ್ಫೂರ್ತಿಯುತವಾಗಿಸುವುದು” ಎಂದರು.
ಪ್ರತಿಯೊಂದು ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕರಿಗೆ ಸಂಪನ್ಮೂಲಗಳು, ನಮೂನೆಗಳು ಮತ್ತು ಪರಿಣಿತರ ಬೆಂಬಲದ ಮೂಲಕ ವೃತ್ತಿಪರರನ್ನು ಸಹಯೋಗ ಸಾಧಿಸಲು ಮತ್ತು ಸುಲಭವಾಗಿ ಸೃಷ್ಟಿಸಲು ಅಗತ್ಯವಾದ ವಿಶೇಷ ಕೆಲಸದ ತಾಣವಾಗಿ ಕೆಲಸ ಮಾಡುತ್ತದೆ.

ಈ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳು ನಮ್ಮ ಪೇಂಟ್ ಕ್ರಾಫ್ಟ್ ಪೇಂಟಿಂಗ್ ಸೇವೆಯ ಮೂಲಕ ಪೇಂಟಿಂಗ್ ಸೇವೆಗಳನ್ನೂ ಒದಗಿಸುತ್ತಿದ್ದು ಪ್ರತಿ ಪೇಂಟ್ ಸ್ಟುಡಿಯೊ ಕೂಡಾ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ಬಣ್ಣಗಳನ್ನು ಹೊಂದಿವೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment