Monday, September 16, 2024
Google search engine
Homeಅಪರಾಧತಾಯಿಗೆ ಗುಂಡಿಕ್ಕಿ, ಪತ್ನಿ ಥಳಿಸಿ, 3 ಮಕ್ಕಳನ್ನು ಮಹಡಿ ಮೇಲಿಂದ ಎಸೆದು ಕೊಂದ ಕಿರಾತಕ!

ತಾಯಿಗೆ ಗುಂಡಿಕ್ಕಿ, ಪತ್ನಿ ಥಳಿಸಿ, 3 ಮಕ್ಕಳನ್ನು ಮಹಡಿ ಮೇಲಿಂದ ಎಸೆದು ಕೊಂದ ಕಿರಾತಕ!

ಒಂದೇ ಕುಟುಂಬದ 5 ಮಂದಿಯನ್ನು ಭೀಕರವಾಗಿ ಹತ್ಯೆಗೈದು ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಿತಾರಾ ಜಿಲ್ಲೆಯಲ್ಲಿ ನಡೆದಿದೆ.

ಪಾಲಾಪುರ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ವ್ಯಕ್ತಿ 45 ವರ್ಷದ ಅನುರಾಗ್ ಸಿಂಗ್ ಕುಡುಕನಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿ ತಾಯಿಗೆ ಮೊದಲು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ನಂತರ ಮೂವರು ಮಕ್ಕಳನ್ನು ಮಹಡಿ ಮೇಲಿಂದ ಎಸೆದು ಕೊಲೆಗೈದಿದ್ದಾನೆ. 5 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ತಾಯಿಗೆ 65 ವರ್ಷ, ಪತ್ನಿಗೆ 40 ವರ್ಷ ಹಾಗೂ 6, 9 ಮತ್ತು 12 ವರ್ಷದ ಮಕ್ಕಳು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಹಿಂದಿನ ಕಾರಣ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments