Sunday, September 8, 2024
Google search engine
Homeಕ್ರೀಡೆಲೇಡಿ ಗಾಗಾ ಹಾಡಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

ಲೇಡಿ ಗಾಗಾ ಹಾಡಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

ಖ್ಯಾತ ಪಾಪ್ ಗಾಯಕಿ ಲೇಡಿ ಗಾಗಾ ಗಾಯನದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅದ್ಧೂರಿ ಚಾಲನೆ ದೊರೆಯಿತು.

ಅಮೆರಿಕದ ಗಾಯಕಿ ಲೇಡಿ ಗಾಗಾ ಫ್ರೆಂಚ್ ಭಾಷೆಯಲ್ಲಿಯೇ ಹಾಡು ಹಾಡಿದ್ದು ವಿಶೇಷವಾಗಿದ್ದು, ಈ ಹಾಡಿನೊಂದಿಗೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದರು.

ಪ್ಯಾರಿಸ್ ನ ಐತಿಹಾಸಿಕ ಸೈನಿ ನದಿ ದಡದ ಮೇಲೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, 205 ದೇಶಗಳಿಂದ ಆಗಮಿಸಿದ್ದ 9500ಕ್ಕೂ ಅಧಿಕ ಕ್ರೀಡಾಪಟುಗಳ ಪಥಸಂಚಲನ ನಡೆಯಿತು.

ಫ್ರೆಂಚ್ ಅಧ್ಯಕ್ಷ ಎಮ್ಮಾನ್ಯಯೆಲ್ ಮಾರ್ಕೊನ್, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥ ಥಾಮಸ್ ಬ್ಯಾಚ್ ಮತ್ತು ಫುಟ್ಬಾಲ್ ದಂತಕತೆ ಜಿನಾದಿನ್ ಜಿದಾನೆ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments