ಆಳವಾದ ಆಕಾಶದಿಂದ ವಿಸ್ಮಯಕಾರಿ ಲೇಸರ್ ಸಂದೇಶ ಭೂಮಿಯನ್ನು ತಲುಪಿದ್ದು, ಇದು ಸುಮಾರು 14 ಕೋಟಿ ಮೈಲು ದೂರದಿಂದ ಬಂದಿರುವುದು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ.
ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ ಈ ವಿಷಯ ಬಹಿರಂಗಪಡಿಸಿದ್ದು, 2023 ಅಕ್ಟೋಬರ್ ನಲ್ಲಿ ಪೈಚೆ 16 ಎಂಬ ನೌಕೆಯನ್ನು ಮಂಗಳ, ಗುರು ಮುಂತಾದ ಗ್ರಹಗಳ ನಡುವಿನ ಅಧ್ಯಯನಕ್ಕೆ ಕಳುಹಿಸಲಾಗಿತ್ತು.
ಪೈಚೆ ನೌಕೆಯಲ್ಲಿ ಆಳವಾದ ಬಾಹ್ಯಕಾಶದಿಂದ ಬರುವ ಲೇಸರ್ ಮುಂತಾದ ಸಂದೇಶಗಳನ್ನು ಸಂಗ್ರಹಿಸುವ ತಂತ್ರಜ್ಞಾನ ಅಳವಡಿಸಲಾಗಿತ್ತು. ಈ ನೌಕೆ ಇದೀಗ 14 ಕೋಟಿ ಮೈಲುಗಳಿಂದ ಬಂದಿರುವ ಲೇಸರ್ ಸಂದೇಶವನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿದೆ. ಇದರ ಅಧ್ಯಯನ ನಡೆಯುತ್ತಿದೆ ಎಂದು ನಾಸಾ ತಿಳಿಸಿದೆ.