Wednesday, July 3, 2024
Google search engine
Homeತಾಜಾ ಸುದ್ದಿಜೂ. 24ರಿಂದ ಲೋಕಸಭಾ ಅಧಿವೇಶನ ಆರಂಭ, 27ರಂದು ರಾಷ್ಟ್ರಪತಿ ಭಾಷಣ

ಜೂ. 24ರಿಂದ ಲೋಕಸಭಾ ಅಧಿವೇಶನ ಆರಂಭ, 27ರಂದು ರಾಷ್ಟ್ರಪತಿ ಭಾಷಣ

18ನೇ ಲೋಕಸಭಾ ಅಧಿವೇಶನ ಜೂನ್ 24ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಜೂನ್ 24ರಿಂದ ಜುಲೈ 3ರವರೆಗೆ 9 ದಿನಗಳ ಕಾಲ ನಡೆಯಲಿರುವ ಲೋಕಸಭಾ ಅಧಿವೇಶನದ ವೇಳೆ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ನಂತರ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಚಿವರು ವಿವರಿಸಿದರು.

ಇದೇ ವೇಳೆ 264ನೇ ಅವಧಿಯ ರಾಜ್ಯಸಭಾ ಕಲಾಪ ಕೂಡ ಜೂನ್ 24ರಿಂದ 9 ದಿನಗಳ ಕಾಲ ನಡೆಯಲಿದೆ ಎಂದು ಅವರು ಹೇಳಿದರು.

ಜೂನ್ 27ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮರ್ಮು ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಮುಂದಿನ 5 ವರ್ಷಗಳ ಆಡಳಿತದ ದೂರದೃಷ್ಟಿಯನ್ನು ಮುಂದಿಡಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments