Monday, July 22, 2024
Google search engine
Homeಜಿಲ್ಲಾ ಸುದ್ದಿಸರ್ಕಾರಿ ಗೌರವಗಳೊಂದಿಗೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರಿ ಗೌರವಗಳೊಂದಿಗೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಇಂದು ಚಾಮರಾಜನಗರದ ಹಾಲಿ ಸಂಸದರಾಗಿದ್ದ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಪ್ರಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

15 ದಿನಗಳ ಹಿಂದೆ ಭೇಟಿಯಾಗಿದ್ದಾಗ ರಾಜಕೀಯ ಮಾತನಾಡಿದೆವು. ರಾಜಕೀಯದಲ್ಲಿ ಸಂತೋಷದ ಕ್ಷಣ ಬಹಳ ಕಡಿಮೆ. ಹೋರಾಟ ಮಾಡುವಾಗ ಸಂತೋಷದ ಕ್ಷಣಗಳು ಕಡಿಮೆ. ಬಹಳ ವರ್ಷ ಗಳ ನಂತರ ಭೇಟಿಯಾಗಿದ್ದ ಕಾರಣ ಸಂತೋಷವಾಗಿದೆ ಎಂದು ಹೇಳಿರಬಹುದು ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೊತೆಯಲ್ಲಿಯೇ ರಾಜಕಾರಣ ಮಾಡಿದವರು, ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಲ್ಲಿ ಒಟ್ಟಿಗಿದ್ದವರನ್ನು ಕಳೆದುಕೊಂಡಾಗ ಬಹಳ ದುಃಖವಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments